ಚಿಕ್ಕ ವಯಸ್ಸಿನಲ್ಲೇ ಬಾರ್ ಲೈಸೆನ್ಸ್‌ಗಾಗಿ ಸುಳ್ಳು ಮಾಹಿತಿ ನೀಡಿದ್ದ ಸಮೀರ್ ವಾಂಖೆಡೆ ವಿರುದ್ಧ ಎಫ್‌ಐಆರ್

ಮುಂಬೈ: ಬಾರ್ ಲೈಸನ್ಸ್ ಪಡೆಯಲು ನಕಲಿ ವಯಸ್ಸಿನ ದಾಖಲೆ ನೀಡಿದ್ದಕ್ಕಾಗಿ ಮಾದಕ ವಸ್ತು ನಿಗ್ರಹ ಸಂಸ್ಥೆ(ಎನ್‌ಸಿಬಿ) ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದೆ.

ಸಮೀರ್ ವಾಂಖೆಡೆ ನವಿ ಮುಂಬೈನಲ್ಲಿ ಬಾರ್ ಹೊಂದಿದ್ದು, ಅಪ್ರಾಪ್ತ ವಯಸ್ಸಿನಲ್ಲೇ ಪರವಾನಗಿ ಪಡೆದಿದ್ದರು ಎಂದು ಎನ್‌ಸಿಪಿ ಮುಖ್ಯಸ್ಥ ನವಾಬ್ ಮಲಿಕ್ ಆರೋಪಿಸಿದ್ದರು. ನವಿ ಮುಂಬೈನ ಸದ್ಗುರು ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್‌ಗೆ ಪರವಾನಗಿ ಪಡೆದಾಗ ಸಮೀರ್‌ಗೆ ಕೇವಲ 17 ವರ್ಷ ಎಂದು ಹೇಳಿದ್ದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

ಬಾರ್ ನಡೆಸಲು ವ್ಯಕ್ತಿಗೆ ಕನಿಷ್ಠ 21 ವರ್ಷವಾಗಿರಬೇಕು. 1997ರ ಅಕ್ಟೋಬರ್ 27ರಂದು ಸಮೀರ್ ವಾಂಖೆಡೆಗೆ ಬಾರ್ ಹಾಗೂ ರೆಸ್ಟೋರೆಂಟ್‌ನ ಪರವಾನಗಿ ನೀಡಲಾಗಿತ್ತು ಎಂದು ಸ್ಥಳೀಯ ಅಬಕಾರಿ ಕಚೇರಿಯ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

ನವಾಬ್ ಮಲಿಕ್ ದೂರು ನೀಡಿದ ಬಳಿಕ ರಾಜ್ಯ ಅಬಕಾರಿ ಇಲಾಖೆ ವಾಂಖೆಡೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ವಾಂಖೆಡೆ ಅವರ ಪರವಾನಗಿ ರದ್ದುಗೊಳಿಸಲಾಗಿದ್ದು, ಐಪಿಸಿ 181, 188, 420, 425, 428, 481 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *