ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

ಬೆಂಗಳೂರು: ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಟ್ಟಿ ಗಣಿ ಅಧ್ಯಕ್ಷ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಹೈಗ್ರೌಂಡ್ಸ್ ಠಾಣೆಯಲ್ಲಿ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ಹಲ್ಲೆಗೆ ಒಳಗಾದ ಉದ್ಯಮಿ ದೀಪಕ್ ರೈ ಪುತ್ರ ವಿಕ್ರಮ್ ರೈ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

ಪಂಚ್ ಮಾಡುವ ಆಯುಧದಿಂದ ಹಲ್ಲೆ ನಡೆಸಿದ್ದು, ಬರೋಬ್ಬರಿ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ಸುಮಾರು 10 ರಿಂದ 15 ಹುಡುಗರನ್ನು ಕರೆಸಿ ಉದ್ಯಮಿ ದೀಪಕ್ ಪುತ್ರ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

ಇತ್ತ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಸಹ ಪ್ರತಿ ದೂರು ನೀಡಿದ್ದಾರೆ. ಗಲಾಟೆ ಸಂಬಂಧ ಇಬ್ಬರ ದೂರುಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಎಫ್‍ಐಆರ್ ಮಾಡಿದ್ದಾರೆ.

ಏನಿದು ಪ್ರಕರಣ?
ವಸಂತನಗರದಲ್ಲಿರುವ ಮಾನಪ್ಪ ವಜ್ಜಲ್ ರ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಗಲಾಟೆಯಾಗಿತ್ತು. ಸೆ.12ರಂದು ರಾತ್ರಿ 10 ಗಂಟೆಗೆ ಸ್ನೇಹಿತ ರೋಲ್ಟ್ ಮೆರೇನ್ ರನ್ನು ಡ್ರಾಪ್ ಮಾಡಲು ವಿಕ್ರಮ್ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಬಂದಿದ್ದ. ಈ ವೇಳೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಹಿಂದೆಯೇ ಪಾರ್ಕಿಂಗ್ ವಿಚಾರವಾಗಿ ಮಾನಪ್ಪ ವಜ್ಜಲ್ ಪುತ್ರ ಎರಡು ಬಾರಿ ಗಲಾಟೆ ಮಾಡಿದ್ದರಂತೆ.

ಇದೀಗ ಆಂಜನೇಯ ಮತ್ತು ಮೌನೇಶ್ ಸೇರಿ 10 ರಿಂದ 15 ಜನ ಹುಡುಗರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ. ಬೆಂಜ್, ಸೆಲ್ಟೋಸ್ ಮತ್ತು ಫಾಚ್ರ್ಯೂನರ್ ಕಾರುಗಳಿಂದ ಪಂಚ್ ಮಾಡುವ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ತಲೆ, ಕಣ್ಣು ಮತ್ತು ದೇಹದ ಇತರೆ ಭಾಗಗಳಿಗೆ ಹಲ್ಲೆ ಮಾಡಿದ್ದಾರೆ. ಕಣ್ಣಿನ ಮೇಲ್ಭಾಗಕ್ಕೆ ರಕ್ತ ಬರುವಂತೆ ಗಾಯಗೊಳಿಸಿದ್ದಾರೆ. ಅಲ್ಲದೆ ನೀನು ಎಲ್ಲಿಗೆ ಹೋದರು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ನೀನು ಪೊಲೀಸ್ ಠಾಣೆಗೆ ಹೋದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಧಮಕಿ ಹಾಕಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಚೇತನ್ ಅವರು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹಲ್ಲೆ ನಂತರ ಎರಡೂ ಕಡೆಯವರು ರಾಜಿಗೆ ಮುಂದಾಗಿದ್ದರು. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ದೂರು ಕೊಟ್ಟರೆ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿ ಕಳುಹಿಸಿದ್ದರು.

Comments

Leave a Reply

Your email address will not be published. Required fields are marked *