ಮೋದಿ ಧರಿಸಿದ್ದ ಖಾಸಿ ಉಡುಗೆ ಬಗ್ಗೆ ವ್ಯಂಗ್ಯ – ಕೀರ್ತಿ ಆಜಾದ್ ವಿರುದ್ಧ ಎಫ್‍ಐಆರ್

ಶಿಲ್ಲಾಂಗ್: ಪ್ರಧಾನಿ ನರೇಂದ್ರ ಮೋದಿ (Narendra Modi) ಇತ್ತೀಚೆಗೆ ಶಿಲ್ಲಾಂಗ್‍ಗೆ ಭೇಟಿ ನೀಡಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೋದಿ ಅಲ್ಲಿನ ಸಾಂಪ್ರದಾಯಿಕ ಖಾಸಿ ಉಡುಪನ್ನು (Khasi Dress) ಧರಿಸಿದ್ದರು. ಈ ಉಡುಪಿನ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ (Kirti Azad) ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಖಾಸಿ ಉಡುಗೆಯ ಬಗ್ಗೆ ಕೀರ್ತಿ ಆಜಾದ್, ಮೋದಿ ತೊಟ್ಟಿರುವ ಉಡುಗೆ ಬಗ್ಗೆ ಪೋಸ್ಟ್ ಮಾಡಿ ಅವರು ಧರಿಸಿರುವುದು ಮಹಿಳೆಯ ಉಡುಗೆ ಎಂದು ಕಾಮೆಂಟ್ ಮಾಡಿದ್ದರು. ಮೋದಿಯವರು ಬುಡಕಟ್ಟು ಉಡುಪಿನ ಫೋಟೋ ಜೊತೆಗೆ ಮಹಿಳೆ ಧರಿಸಿದ ಖಾಸಿ ಬಟ್ಟೆ ಫೋಟೋ ಹಾಕಿ ಅವರು ಗಂಡು ಅಲ್ಲ ಹೆಣ್ಣು ಅಲ್ಲ. ಫ್ಯಾಷನ್‍ನ ಆರಾಧಕ ಮಾತ್ರ ಎಂದು ಕೀರ್ತಿ ಆಜಾದ್ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಹೀರಾಬೆನ್ ಆರೋಗ್ಯ ಸ್ಥಿರ – ತಾಯಿ ಭೇಟಿಗೆ ಅಹಮದಾಬಾದ್ ತೆರಳಿದ ಮೋದಿ

ಆ ಬಳಿಕ ಈ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಬಳಿಕ ಎಚ್ಚೆತ್ತ ಕೀರ್ತಿ ಆಜಾದ್, ನನಗೆ ಉಡುಪಿಗೆ ಅಗೌರವಿಸುವ ಉದ್ದೇಶ ಇಲ್ಲ. ಮೋದಿಯವರ ಫ್ಯಾಶನ್ ಹೇಳಲು ಪ್ರಯತ್ನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದರು. ಇದೀಗ ಈ ಬಗ್ಗೆ ಸದಾರ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: 1 ವರ್ಷದ ಬಳಿಕ ಜೈಲಿನಿಂದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬಿಡುಗಡೆ

ಡಿ.18 ರಂದು ಮೇಘಾಲಯದಲ್ಲಿ 2,450 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ಶಿಲ್ಲಾಂಗ್‍ಗೆ ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಗಾರೋ ಟೋಪಿಯೊಂದಿಗೆ ಸಾಂಪ್ರದಾಯಿಕ ಖಾಸಿ ಉಡುಪನ್ನು ಧರಿಸಿದ್ದರು. ಗರೋಸ್, ಖಾಸಿಗಳು ಮತ್ತು ಜಯಂತಿಯಾಗಳು ಮೇಘಾಲಯದ ಮೂರು ಪ್ರಮುಖ ಬುಡಕಟ್ಟು ಜನಾಂಗದವರಾಗಿದ್ದು, ಇದೇ ಉಡುಪನ್ನು ಮೋದಿ ಧರಿಸಿ ಗಮನಸೆಳೆದಿದ್ದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *