ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ವಿರುದ್ಧ FIR

ಬೆಂಗಳೂರು: ಮಾಜಿ ಸಚಿವ ಹಾಲಪ್ಪ ಆಚಾರ್ (Halappa Achar) ಗನ್ ಮ್ಯಾನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhanasoudha Police Station) ಎಫ್‍ಐ ಆರ್ ದಾಖಲಾಗಿದೆ.

ಸಚಿವರ ಬಳಿ ಕಾಮಗಾರಿ ಮಾಡಿಕೊಡಿಸೋದಾಗಿ ನಂಬಿಸಿ ಮುಂಗಡವಾಗಿ ಹಣ ಪಡೆದು ಕಾಮಗಾರಿಯೂ ಕೊಡಿಸದೆ ಮುಂಗಡವಾಗಿ ಪಡೆದ ಹಣವೂ ಕೊಡದೆ ವಂಚನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಾಘವೇಂದ್ರ ವಿರುದ್ಧ ಹೆಚ್ ರಾಜಾನಾಯ್ಕ್ ದೂರು ದಾಖಲಿಸಿದ್ದಾರೆ.

2020-21ರಲ್ಲಿ ವಂಚನೆಗೆ ಒಳಗಾಗಿರೋ ರಾಜಾ ನಾಯ್ಕ್ ದಾವಣಗೆರೆ ಜಿಲ್ಲೆಯ ಶ್ರೀರಾಮ ನಗರ ಗ್ರಾಮದಲ್ಲಿ ಅಂಗವಾಡಿ ಕಟ್ಟಡ ನಿರ್ಮಾಣ ಮಾಡಲು ಸಚಿವರ ಬಳಿ ಅನುದಾನ ಕೇಳಲು ವಿಧಾನಸೌಧಕ್ಕೆ ಬಂದಿರುತ್ತಾರೆ. ಸಚಿವರಾಗಿದ್ದ ಹಾಲಪ್ಪ ಬಸಪ್ಪ ಅಚಾರ್ ಗನ್ ಮ್ಯಾನ್ ರಾಘವೇಂದ್ರ ರಾಜಾ ನಾಯ್ಕ್ ಪರಿಚವಾಗುತ್ತಾರೆ. ಆರೋಪಿ ಸಚಿವರ ಗನ್ ಮ್ಯಾನ್ ರಾಘವೇಂದ್ರ (Gun Man Raghavendra) ಸಚಿವರ ಬಳಿ 30 ಕೋಟಿ ಅನುದಾನ ಮಾಡಿಸಿಕೊಡುತ್ತೇನೆ. ನನಗೆ 12% ಕಮಿಷನ್ ಕೊಡಲು ಹೇಳುತ್ತಾನೆ.

ಗನ್ ಮ್ಯಾನ್ ಡಿಮಾಂಡ್‍ಗೆ ವಂಚನೆಗೆ ಒಳಗಾಗಿರೋ ವ್ಯಕ್ತಿ ಸಮ್ಮತಿ ಸೂಚಿಸುತ್ತಿರುತ್ತಾರೆ. ಮೋಸ ಹೋಗಿರೋ ವ್ಯಕ್ತಿ ಆರೋಪಿ ಮಾತಿಗೆ ಒಕೆ ಏನ್ನುತ್ತಿದ್ದಂತೆ ಮುಂಗಡವಾಗಿ 10 ಲಕ್ಷ ಹಣ ಕೊಡುವಂತೆ ಕೇಳಿ 10 ಹಣ ಪಡೆದಿರುತ್ತಾನೆ. ಹಣ ಪಡೆದ ಮೇಲೆ ಕಾಮಗಾರಿ ಕೂಡ ಮಾಡದೇ ಮುಂಗಡವಾಗಿ ಪಡೆದಿದ್ದ ಹಣವು ಕೊಡದೆ ಸತಾಯಿಸುತ್ತಿದ್ದರಿಂದ ಗನ್ ಮ್ಯಾನ್ ವಿರುದ್ಧ ಮೋಸ ಹೋದ ವ್ಯಕ್ತಿ ಪೊಲೀಸ್ ಠಾಣಾ ಮೇಟ್ಟಿಲೇರಿದ್ದಾರೆ. ಸದ್ಯ ಆರೋಪಿ ಗನ್ ಮ್ಯಾನ್ ರಾಘವೇಂದ್ರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಜಿ ಸಚಿವರ ಗನ್ ಮ್ಯಾನ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]