ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಟೆಂಪಲ್‌ ರನ್‌ – ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಕೆ

ಮಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ (Umapathy Srinivas) ಅವರು ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ವಿವಿಧ ಕಡೆ ಕುಟುಂಬ ಸಮೇತರಾಗಿ ಉಮಾಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೊತೆ ಮಾತುಕತೆ ನಡೆಸಿದರು. ಬಳಿಕ ಉಮಾಪತಿ ಕುಟುಂಬ ಹೊರನಾಡು, ಶೃಂಗೇರಿ ಕಡೆ ತಲುಪಿತು. ಇದನ್ನೂ ಓದಿ: ಪವಿತ್ರಾಗೌಡ ಮನೆಯಲ್ಲಿ ಸ್ಥಳ ಮಹಜರು – ಮನೆಯ ಮೂಲೆಮೂಲೆಯನ್ನೂ ಜಾಲಾಡಿದ ಅಧಿಕಾರಿಗಳು

‘ರಾಬರ್ಟ್‌’ ಸಿನಿಮಾಗಾಗಿ ದರ್ಶನ್‌, ಉಮಾಪತಿ ಶ್ರೀನಿವಾಸ್‌ ಜೊತೆ ಕೈಜೋಡಿಸಿದ್ದರು. ದರ್ಶನ್‌ ನಟನೆಯ ರಾಬರ್ಟ್‌ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದರು. ಆನಂತರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.

‘ಕಾಟೇರ’ ಚಿತ್ರದ ಸಕ್ಸಸ್‌ ವೇಳೆ, ಸಿನಿಮಾದ ಟೈಟಲ್‌ ವಿಚಾರಕ್ಕೆ ಮತ್ತೆ ದರ್ಶನ್‌ ಹಾಗೂ ಉಮಾಪತಿ ನಡುವೆ ವಾಕ್ಸಮರ ನಡೆದಿತ್ತು. ‘ಅಯ್ಯೋ ತಗಡೇ.. ಗುಮ್ಮುಸ್ಕೋಬೇಡ’ ಎಂಬ ಪದ ಪ್ರಯೋಗ ಪರಸ್ಪರರ ನಡುವೆ ಆಗ ಆಗಿತ್ತು. ಇದನ್ನೂ ಓದಿ: ದರ್ಶನ್‍ಗೆ ಮತ್ತಷ್ಟು ಸಂಕಷ್ಟ- ಸ್ವಾಮಿ ಹತ್ಯೆ ದಿನ ಧರಿಸಿದ್ದ ಬಟ್ಟೆ, ಶೂ ಸೀಜ್