ಬೆಂಗ್ಳೂರಿಗರೇ ಮನೆ ಬಾಡಿಗೆ ಕೊಡೋ ಮುನ್ನ ಎಚ್ಚರ- ಬಾಡಿಗೆ ಹಣ ಕೇಳಿದ್ದಕ್ಕೆ ಬಿದ್ದಿದೆ ನಿರ್ಮಾಪಕನ ಹೆಣ..!

ರಮೇಶ್ ಜೈನ್ ಕೊಲೆಯಾದ ದುರ್ದೈವಿ

ಬೆಂಗಳೂರು: ಬಾಡಿಗೆ ಹಣ ಕಲೆಕ್ಟ್ ಮಾಡುವುದಕ್ಕೆ ಹೋದ ನಿರ್ಮಾಪಕನನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಾನಿ ಚಿತ್ರದ ನಿರ್ಮಾಪಕ ರಮೇಶ್ ಜೈನ್ ಕೊಲೆಯಾದ ದುರ್ದೈವಿ. ರಮೇಶ್ ಜೈನ್ ಬ್ಯಾಟರಾಯನಪುರದ ಕವಿತಾ ಲೇಔಟ್‍ನಲ್ಲಿರುವ ತಮ್ಮ ಮನೆಯ ಬಾಡಿಗೆ ಹಣವನ್ನ ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ಹೋಗಿದ್ದರು. ಆ ಮನೆಯಲ್ಲಿ ಬಾಡಿಗೆಯಿದ್ದ ನಸೀರ್ ಹಾಗೂ ಪಾಷ ಕಳೆದ 7 ವರ್ಷದಿಂದ ಬಾಡಿಗೆಯನ್ನೇ ಕೊಡುತ್ತಿರಲಿಲ್ಲ. ಆಗ ಬಾಡಿಗೆ ವಿಚಾರದಲ್ಲಿ ಜಗಳವಾಡಿ ಕೊಲೆ ಮಾಡಿದ್ದಾರೆ.

ಬುಧವಾರ ಸಹ ಹೇಗಾದರೂ ಮಾಡಿ ಬಾಡಿಗೆ ಹಣ ಕಲೆಕ್ಟ್ ಮಾಡಿಕೊಳ್ಳೋಣ ಅಂತ ಹೋದಾಗ ಗಲಾಟೆಯಾಗಿದೆ. ಆಗ ಇಸ್ಲಾಂ ಪಾಷ ನಸೀರ್, ಜುಬೇದ್, ಸಬೀನಾ, ಹೀನಾ ಸೇರಿಕೊಂಡು ನಿರ್ಮಾಪಕ ರಮೇಶ್ ಜೈನ್‍ನನ್ನು ಕೊಲೆ ಮಾಡಿದ್ದಾರೆ. ಬಳಿಕ ಕೋಳಿ ತ್ಯಾಜ್ಯದ ಮೂಟೆಯಲ್ಲಿ ಶವ ಸಾಗಿಸಿ ಕೆಂಗೇರಿ ಮೋರಿಯಲ್ಲಿ ಎಸೆದು ಬಂದಿದ್ದಾರೆ. ನಂತರ ತಮಗೆ ಏನು ಗೊತ್ತಿರದ ಹಾಗೇ ಸುಮ್ಮನಾಗಿ ಬಿಟ್ಟಿದ್ದರು ಎಂದು ಮೃತ ರಮೇಶ್ ಸ್ನೇಹಿತ ಸೋಮ ತಿಳಿಸಿದ್ದಾರೆ.

ರಮೇಶ್ ಜೈನ್ ಎರಡು ದಿನಗಳಿಂದ ಮನೆಗೆ ಬಾರದಿದ್ದಕ್ಕೆ ಅನುಮಾನಗೊಂಡ ಮಗ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ರಮೇಶ್ ಜೈನ್ ಹುಡುಕಾಟ ನಡೆಸುತ್ತಿದ್ದನ್ನ ಕಂಡ ಆರೋಪಿಗಳು ತಾವೇ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾರೆ. ಪ್ರಕರಣ ಸಂಬಂಧ ಐವರನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ರವಿ.ಡಿ.ಚನ್ನಣ್ಣನವರ್ ಹೇಳಿದ್ದಾರೆ.

ಕೊಲೆಯಾದ ನಿರ್ಮಾಪಕ ನಸೀರಳಾ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಅಷ್ಟೇ ಅಲ್ಲದೇ ಪತಿ ಇಲ್ಲದ ವೇಳೆ ಲಾಂಗ್ ಡ್ರೈವ್ ಕರೆಯುತ್ತಿದ್ದನು. ಅದಕ್ಕೆ ಕೊಲೆ ಮಾಡಿದ್ದೀವಿ ಅಂತ ಆರೋಪಿಗಳು ಪ್ರಾಥಮಿಕ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *