ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆ ಗಲಾಟೆ

ಳೆದ ಮೂರು ವರ್ಷಗಳಿಂದ ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿಯ ಚುನಾವಣೆ ನಡೆಯದೇ ಇರುವ ಕಾರಣಕ್ಕಾಗಿ ಇಂದು ಫಿಲ್ಮ್ ಚೇಂಬರ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಚುನಾವಣೆ ನಡೆಸಿ ಎಂದು 30ಕ್ಕೂ ಹೆಚ್ಚು ನಿರ್ಮಾಪಕರು ಇಂದು ಚೇಂಬರ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಿರ್ಮಾಪಕ ಭಾ.ಮಾ. ಹರೀಶ್ ಮತ್ತು ಫಿಲ್ಮ್ ಚೇಂಬರ್ ನ ಎಂ.ಎನ್. ಸುರೇಶ್ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

ಏಕ ವಚನ ಪ್ರಯೋಗ ಮಾಡಿ ಇಬ್ಬರೂ ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ, ವಾಣಿಜ್ಯ ಮಂಡಳಿಯ ವಾತಾವರಣವೇ ಬದಲಾಯಿತು. ಈ ಹಿಂದೆ ಭಾ.ಮಾ. ಹರೀಶ್ ಮತ್ತು ಇತರ ನಿರ್ಮಾಪಕರು ಕೂಡಲೇ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದರು. ಸಂಬಂಧಿಸಿದ ಇಲಾಖೆಗೂ ಪತ್ರ ಬರೆದಿದ್ದರು. ಸಹಕಾರ ಮಂಡಳಿಯು ಬೇಗ ಚುನಾವಣೆ ನಡೆಸುವಂತೆ ವಾಣಿಜ್ಯ ಮಂಡಳಿಗೆ ತಾಕೀತು ಮಾಡಿತ್ತು. ಆದರೆ, ಈವರೆಗೂ ಚುನಾವಣೆ ನಡೆಸದೇ ಇರುವ ಕಾರಣಕ್ಕಾಗಿ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿ, ಪ್ರತಿಭಟನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

ಈ ಕುರಿತು ಮಾತನಾಡಿದ ಭಾ.ಮಾ ಹರೀಶ್, “ಕಳೆದ ಮೂರು ವರ್ಷಗಳಿಂದ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿಲ್ಲ. ಸಾಕಷ್ಟು ಬಾರಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದೇವೆ. ಪತ್ರಗಳನ್ನೂ ಕೊಟ್ಟಿದ್ದೇವೆ. ಸಕಾರಣವಿಲ್ಲದೇ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಕೂಡಲೇ ಚುನಾವಣೆ ನಡೆಸದಿದ್ದರೆ ಅಹೋರಾತ್ರಿ ಪ್ರತಿಭಟನೆ ಮಾಡಲಿದ್ದೇವೆ’ ಅಂದರು.

ನಿರ್ಮಾಪಕರ ಮನವಿ ಆಲಿಸಿದ ಎನ್. ಎಂ. ಸುರೇಶ್, “ನಿರ್ಮಾಪಕರ ಮನವಿ ಸ್ವೀಕರಿಸಿದ್ದೇವೆ. ಎರಡು ದಿನಗಳಲ್ಲಿ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ’ ಎಂದಿದ್ದಾರೆ.

Comments

Leave a Reply

Your email address will not be published. Required fields are marked *