ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

ಉಡುಪಿ: ರಾಜ್ಯದ ಹಿಜಬ್- ಕೇಸರಿ ಶಾಲು ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹಿಜಬ್ ಹೋರಾಟದ ರೂಪುರೇಷೆ ಹಿಂದೆಯೇ ಮಾಡಲಾಗಿತ್ತು. ಅದಕ್ಕಾಗಿಯೇ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆ ತೆರೆಯಲಾಯ್ತು. ಆ ನಂತರ ಉಡುಪಿ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಹಿಜಬ್ ಗಾಗಿ ಮನವಿ ಕೊಟ್ಟರು. ಕಾಲೇಜು ಹಿಜಬ್ ಅವಕಾಶ ಕೊಡದಿದ್ದಾಗ ಅಂತಾರಾಷ್ಟ್ರೀಯ ಚರ್ಚೆಗೆ ವೇದಿಕೆ ಸಿದ್ಧ ಮಾಡಿದರು. ಕಾಲೇಜು, ಜಿಲ್ಲೆ ರಾಜ್ಯ ದೇಶಾದ್ಯಂತ, ಹೊರದೇಶಕ್ಕೆ ವ್ಯಾಪಿಸಲು ಕಾರಣವಾಯ್ತು. ಕೋರ್ಟ್ ಮೆಟ್ಟಿಲೇರುವ ಪ್ಲ್ಯಾನ್ ಮೊದಲೇ ಮಾಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲಾನ್ ನಡೆದಿತ್ತು. ನಾಲ್ವರು ಹಿಜಾಬ್ ಸಂತ್ರಸ್ತೆಯರು ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರಮೋಟ್ ಮಾಡತೊಡಗಿದ್ದರು. ನವೆಂಬರ್ ತಿಂಗಳಲ್ಲಿ ಬಾಬ್ರಿ ಮಸೀದಿ ತೀರ್ಪಿನ ವಿರುದ್ಧ ಟ್ವೀಟ್ ಮಾಡಿದ್ದರು. ಯುವತಿಯರ ಪ್ರತಿ ಟ್ವೀಟ್ ಗೆ ಸಿಎಫ್‍ಐ ರಾಷ್ಟ್ರಾಧ್ಯಕ್ಷ ರಿಟ್ವೀಟ್ ಮಾಡುತ್ತಿದ್ದರು. ಇದೀಗ ವಿಜಯ್ ಪಟೇಲ್ ಎಂಬವರಿಂದ ಸಿಎಫ್‍ಐ ಸಂಘಟನೆಯ ಟ್ವಿಟ್ಟರ್ ಟ್ರೆಂಡ್ ರಹಸ್ಯ ಬಯಲಾಗಿದೆ.

ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಸಿಎಎಫ್ ಐ ಸಕ್ರಿಯ ಕಾರ್ಯಕರ್ತರಾಗಿದ್ದ ಯುವತಿಯರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಅಲ್ಮಾಸ್, ಮುಸ್ಕಾನ್, ಅಲಿಯಾ ಅಸಾದಿ, ಮೊದಲಾದವರ ಟ್ವಿಟ್ಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದೆ. ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿರುವ ಮೂವರು ಯುವತಿಯರು ನವೆಂಬರ್ 21ರಂದು ಮಸೀದಿ ಮೈಕುಗಳನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದರು. ಡಿಸೆಂಬರ್ 12ಕ್ಕೆ ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಯುವತಿಯರು ಟ್ವೀಟ್ ಮಾಡಿದ್ದರು. ಡಿಸೆಂಬರ್ 24ರ ಬಳಿಕ ಯುವತಿಯರು ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದರು. ಒಟ್ಟಿನಲ್ಲಿ ಇದೀಗ ಯುವತಿಯರ ಟ್ವಿಟರ್ ಟ್ರಾಕ್ ರೆಕಾರ್ಡಿನಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಅಡಗಿವೆ.

Comments

Leave a Reply

Your email address will not be published. Required fields are marked *