ಆರತಿ ತಟ್ಟೆ ಹಿಡಿದು ಪೂಜೆಗಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಾವೇರಿ: ಮಾಲತೇಶ ಸ್ವಾಮಿ ದೇವಾಲಯದಲ್ಲಿ ಆರತಿ ತಟ್ಟೆ ಹಿಡಿದು ಪೂಜೆಗಾಗಿ ಎರಡು ಕುಟುಂಬಗಳ ನಡುವೆ ಕಿತ್ತಾಟ ನಡೆದಿದ್ದು, ದೇವರ ಮುಂದೆಯೇ ತ್ರಿಶೂಲದಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ 7:22 ಗಂಟೆಗೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪಪ್ಪಾರ ಉರ್ಫ್ ಬಣಕಾರ ಹಾಗೂ ಪೂಜಾರ ಕುಟುಂಬದ ಸದಸ್ಯರು ನಾವು ಪೂಜೆ ಮಾಡುತ್ತೇವೆ ನಾವು ಪೂಜೆ ಮಾಡುತ್ತೇವೆ ಎಂದು ಕಿತ್ತಾಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಈ ವೇಳೆ ಪರಸ್ಪರರಿಂದ ಹಲ್ಲೆ, ಅವಾಚ್ಯ ಪದಗಳ ನಿಂದನೆ ಮಾಡಿಕೊಂಡಿದ್ದಾರೆ. ಪರಸ್ಪರರ ನಡುವೆ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ. ಪೂಜಾರಿಯನ್ನ ತಳ್ಳಾಡಿ ತ್ರಿಶೂಲ ಕಿತ್ತುಕೊಂಡು ತ್ರಿಶೂಲದಿಂದ ಹಲ್ಲೆ ಮಾಡಲು ಯತ್ನಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರಿಣಾಮ ಸಂತೋಷ ಭಟ್ ಪೂಜಾರಿ ಏಳು ಜನರ ಮೇಲೆ ದೂರು ದಾಖಲು ಮಾಡಿದ್ದಾರೆ.

ಸಂತೋಷ್ ಅವರು, ಶಿವಪ್ಪ ಬಣಕಾರ, ಪ್ರಕಾಶ್ ಉಪ್ಪಾರ, ಸುನೀಲ್ ಉಪ್ಪಾರ, ಮಹಾದೇವಪ್ಪ ಉಪ್ಪಾರ, ಗುರುರಾಜ್ ಉಪ್ಪಾರ, ಮೃತ್ಯುಂಜಯ ಉಪ್ಪಾರ ಮತ್ತು ಸುಭಾಶ್ ಉಪ್ಪಾರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋದಾಗ ನನ್ನ ಗಂಡ ಮೃತ್ಯುಂಜಯ ಬಣಕಾರ ಹಾಗೂ ಮೈದುನನ್ನ ಸಂತೋಷ ಭಟ್ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಮೈಕೈ ಮುಟ್ಟಿ, ಅವಾಚ್ಯವಾಗಿ ಬೈದಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ಬಣಕಾರ ಕುಟುಂಬದ ಮಹಿಳೆ ತಿಳಿಸಿದರು. ಇದನ್ನೂ ಓದಿ: ರತಿಕ್ರೀಡೆಗಾಗಿ ಪತ್ನಿಯನ್ನು ಅದಲುಬದಲು ಮಾಡುವ ಪತಿಯರು – 7 ಆರೋಪಿಗಳು ಅರೆಸ್ಟ್

ಸಂತೋಷ್ ಭಟ್ ಸೇರಿದಂತೆ 9 ಜನರ ವಿರುದ್ಧ ಪ್ರತಿದೂರನ್ನು ಬಣಕಾರ ಕುಟುಂಬದ ಮಹಿಳೆ ದಾಖಲು ಮಾಡಿದ್ದಾರೆ. ಪ್ರಸ್ತುತ ಎರಡು ಕುಟುಂಬಗಳ ನಡುವೆ ಪೂಜೆ ವಿಚಾರವಾಗಿ ಕಿತ್ತಾಟ ಪ್ರಾರಂಭವಾಗಿದ್ದು, ಎರಡು ಕುಟುಂಬ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿವೆ.

Comments

Leave a Reply

Your email address will not be published. Required fields are marked *