EXCLUSIVE: ರೆಸಾರ್ಟ್ ನಲ್ಲಿ ಶಾಸಕರಿಬ್ಬರ ಡಿಶುಂ ಡಿಶುಂ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯ

-ಫಸ್ಟ್ ಪಂಚ್ ಮಾಡಿದ್ಯಾರು?

ಬೆಂಗಳೂರು: ಆಪರೇಷನ್ ಕಮಲದಿಂದ ಬಜಾವ್ ಆಗಲು ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿತ್ತು, ಈ ವೇಳೆ ಶಾಸಕರಾದ ಗಣೇಶ್ ಮತ್ತು ಆನಂದ್ ಸಿಂಗ್ ಇಬ್ಬರು ಹೊಡೆದಾಡಿಕೊಂಡಿದ್ದರು. ಸದ್ಯ ಇಬ್ಬರ ಡಿಶುಂ ಡಿಶುಂ ಫೈಟ್ ನ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ವಿಡಿಯೋದಲ್ಲಿ ಏನಿದೆ?
ಕಂಪ್ಲಿ ಶಾಸಕ ಗಣೇಶ್ ಕೊರಳಪಟ್ಟಿ ಹಿಡಿದಿರುವ ವಿಜಯನಗರ ಶಾಸಕ ಆನಂದ್ ಸಿಂಗ್ ಹಿಡಿದಿದ್ದಾರೆ. ನೀನು ಮಾಡಿದ್ದು ತಪ್ಪು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆನಂದ್ ಸಿಂಗ್ ಮೊದಲು ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗುತ್ತಿದೆ. ಗಲಾಟೆಗೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗಣೇಶ್ ಹಲ್ಲೆ ನಡೆಸಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ನಾನು ಹಲ್ಲೆ ಮಾಡಲು ಹೋಗಿರಲಿಲ್ಲ. ನನ್ನ ಕೋಣೆಗೆ  ಬಂದ ಆನಂದ್ ಸಿಂಗ್ ಬಂದು ಗಲಾಟೆ ಮಾಡಿದರು. ನನ್ನದು ಯಾವುದೇ ತಪ್ಪಿಲ್ಲ ಎಂದು ಗಣೇಶ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದರು. ಸದ್ಯ ಜೈಲಿನಲ್ಲಿರುವ ಶಾಸಕ ಗಣೇಶ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ನಾಯಕರು ಈ ವಿಷಯವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಮಾಡಿದ್ದರು. ಕೈ ಹಿರಿಯ ನಾಯಕರು ಇಬ್ಬರು ಶಾಸಕರ ನಡುವೆ ರಾಜಿ ಸಂಧಾನಕ್ಕೆ ಮುಂದಾಗಿದ್ರೂ ಫಲಪ್ರದವಾಗಿರಲಿಲ್ಲ.

ಹಲ್ಲೆಯ ಬಳಿಕ ಆನಂದ್ ಸಿಂಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಘಟನೆ ಬಳಿಕ ನಾಪತ್ತೆಯಾಗಿದ್ದ ಶಾಸಕ ಗಣೇಶ್ ರನ್ನು ಒಂದು ತಿಂಗಳು ಬಳಿಕ ಬಿಡದಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ:ರಾಹುಲ್ ಗಾಂಧಿ ಫುಲ್ ಗರಂ: ಆನಂದ್ ಸಿಂಗ್ ಕುಟುಂಬಸ್ಥರ ಮನವೊಲಿಕೆಗೆ ಕೈ ನಾಯಕರಿಂದ ಸರ್ಕಸ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *