ಮಂಡ್ಯದಲ್ಲಿ ಶಂಕುಸ್ಥಾಪನೆ ಕಲ್ಲಿಗಾಗಿ ಕಾಂಗ್ರೆಸ್, ಜೆಡಿಎಸ್ ಕಲಹ..!

ಮಂಡ್ಯ: ರಾಜ್ಯದಲ್ಲಿ ದೋಸ್ತಿ ಸರ್ಕಾರವಿದ್ದು ಎಲ್ಲದ್ರಲ್ಲೂ ಹೊಂದಾಣಿಕೆ ರಾಜಕೀಯ ನಡೀತಿದೆ. ಆ ಊರಲ್ಲಿ ಶಂಕುಸ್ಥಾಪನೆ ಕಲ್ಲಿಗಾಗಿ ಹಾಲಿ-ಮಾಜಿ ಶಾಸಕರ ನಡುವೆ ರಾಜಕೀಯ ಶುರುವಾಗಿದೆ. ರಾಜಕೀಯ ನಾಯಕರ ಪಾಲಿಟಿಕ್ಸ್ ಫೈಟ್‍ಗೆ ಹೆದರಿದ ಪೊಲೀಸರು ಶಂಕುಸ್ಥಾಪನೆ ಕಲ್ಲುಗಳಿಗೆ ಬಂದೋಬಸ್ತ್ ಮಾಡಿದ್ದಾರೆ.

ಜಿಲ್ಲೆ ಮಳವಳ್ಳಿಯಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವಣ ನಿರ್ಮಾಣ ಮಾಡಲಾಗ್ತಿದೆ. 2012ರಲ್ಲಿ ಮಾಜಿ ಶಾಸಕ ನರೇಂದ್ರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. 2014ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಭವನ ಉದ್ಘಾಟಿಸಿದ್ದರು. ಆದ್ರೆ ಕಳೆದ ಡಿಸೆಂಬರ್‍ನಲ್ಲಿ ರಾತ್ರೋರಾತ್ರಿ ಭವನದಲ್ಲಿ ಮತ್ತೊಂದು ಕಲ್ಲು ಪ್ರತ್ಯಕ್ಷವಾಗಿದ್ದು ಅದ್ರಲ್ಲಿ 2007ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಂಕುಸ್ಥಾಪನೆ ಅಂತ ಹೇಳಲಾಗಿದೆ. ಇದು ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಕೆರಳಸಿದ್ದು ಕೂಡಲೇ ಬೋಗಸ್ ಶಿಲಾನ್ಯಾಸದ ಕಲ್ಲನ್ನು ತೆಗೆಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವಿರುದ್ಧ ಹರಿಹಾಯ್ದಿರುವ ಹಾಲಿ ಶಾಸಕ ಡಾ.ಅನ್ನದಾನಿ, 2007ರ ಏಪ್ರಿಲ್‍ನಲ್ಲಿ ಅಂದಿನ ಸಿಎಂ ಎಚ್‍ಡಿಕೆ ಶಂಕುಸ್ಥಾಪನೆ ಮಾಡಿದ್ರು. ಅಂದು 58 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದ್ದರು. ಆದ್ರೆ ನರೇಂದ್ರಸ್ವಾಮಿ ಶಾಸಕರಾಗಿದ್ದ 10 ವರ್ಷಗಳಲ್ಲಿ ನೆರವೇರಿಸಿದ್ದ ಶಂಕುಸ್ಥಾಪನಾ ಕಲ್ಲುಗಳು ನಾಪತ್ತೆಯಾಗಿವೆ. ಈ ವಿಚಾರ ಸುಳ್ಳು ಎಂದಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ನರೇಂದ್ರ ಸ್ವಾಮಿ ಹೇಳ್ತಿರೋದು ಸುಳ್ಳಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತಾರಾ ಎಂದು ಸವಾಲು ಹಾಕಿದ್ದಾರೆ.

ಚುನಾವಣೆ ವೇಳೆ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಕ್ಷೇತ್ರದ ಇಬ್ಬರು ನಾಯಕರು ಅದನ್ನ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ರೂ ಬಹುತೇಕ ವಿಧಾನಸಭಾ ಕ್ಷೇತ್ರಗಳ ರಾಜಕೀಯ ಚಿತ್ರಣ ಹೀಗೆಯೇ ಇದೆ ಅನ್ನೋದಕ್ಕೆ ಮಳವಳ್ಳಿ ಕ್ಷೇತ್ರ ಉತ್ತಮ ಉದಾಹರಣೆ ಎನ್ನಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *