ಸ್ಪೀಕರ್ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಮಧ್ಯೆ ಫೈಟ್!

ಬೆಂಗಳೂರು: ಸಂಪುಟ ರಚನೆ ವಿಚಾರವೇ ಇನ್ನೂ ಬಗೆಹರಿದಿಲ್ಲ. ಇದರ ಮಧ್ಯೆ ಸ್ಪೀಕರ್ ಸ್ಥಾನಕ್ಕಾಗಿ ದೋಸ್ತಿ ಪಕ್ಷಗಳ ನಡುವೆ ಫೈಟ್ ನಡೆದಿದೆ.

ಸಿಎಂ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದೀವಿ. ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಿ ಎಂದು ಕೈ ನಾಯಕರು ಕೇಳುತ್ತಿದ್ದಾರೆ. ಆದ್ರೆ ಜೆಡಿಎಸ್ ನವರು ಅದೂ ಕೂಡ ನಮಗೇ ಬೇಕು ಅಂತಾ ಬಿಗಿಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಹಗ್ಗಜಗ್ಗಾಟ ಮುಂದುವರೆದಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಕಾಂಗ್ರೆಸ್ ಪಕ್ಷ, ಅನುಭವಿ ರಾಜಕಾರಣಿ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಲು ಬಯಸುತ್ತಿದೆ ಎನ್ನಲಾಗಿದೆ. ಅತ್ತ ಜೆಡಿಎಸ್ ಕೂಡ ಸಜ್ಜನ ರಾಜಕಾರಣಿ ಎಟಿ ರಾಮಸ್ವಾಮಿಯವರನ್ನ ಸಭಾಧ್ಯಕ್ಷರನ್ನು ಮಾಡಲು ಬಯಸುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಸರ್ಕಾರ ರಚನೆಗೆ ಮುನ್ನವೇ ಸಂಪುಟ ಸಂಕಟ – ಅಧಿಕಾರ ಹಂಚಿಕೆಯಲ್ಲಿ ಇನ್ನೂ ಮೂಡಿಲ್ಲ ಒಮ್ಮತ!

ಒಂದು ವೇಳೆ ಭವಿಷ್ಯದಲ್ಲಿ ದೋಸ್ತಿಗಳ ನಡುವೆ ಬಿರುಕು ಉಂಟಾದ್ರೆ, ಆಗ ಸದನದಲ್ಲಿ ಮಹತ್ವದ ಪಾತ್ರ ವಹಿಸೋದು ಸ್ಪೀಕರ್ ಅವರೇ. ಹೀಗಾಗಿ ಎರಡೂ ಪಕ್ಷಗಳು ಈ ಮಹ್ವತದ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಇದನ್ನೂ ಓದಿ: ದೋಸ್ತಿಗಳಿಗೆ ಆಪರೇಷನ್ ಕಮಲದ ಭೀತಿ – ಇನ್ನೂ ನಾಲ್ಕು ದಿನ ರೆಸಾರ್ಟ್ ನಲ್ಲೇ ಇರಲಿದ್ದಾರೆ ಶಾಸಕರು!

Comments

Leave a Reply

Your email address will not be published. Required fields are marked *