ಯಜಮಾನನ ಮೇಲೆ ದಾಳಿಗೆ ಬಂದ ಕೋತಿಗಳನ್ನ ಹಿಮ್ಮೆಟ್ಟಿಸಿದ ಬೆಕ್ಕು – ವಿಡಿಯೋ ನೋಡಿ

ಬೆಂಗಳೂರು: ಸಾಕಿದ ಯಜಮಾನನ ಮೇಲೆ ದಾಳಿ ಮಾಡಲು ಬಂದ ಕೋತಿಗಳನ್ನು ಬೆಕ್ಕೊಂದು ಹಿಮ್ಮೆಟ್ಟಿಸಿದ ಅಪರೂಪದ ಕಾಳಗ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಈ ಡಿಫೆರೆಂಟ್ ಅನಿಮಲ್ ಫೈಟ್ ನಡೆದಿದೆ. ಮೂರು ಕೋತಿಗಳ ಹಿಂಡನ್ನು ಹಿಮ್ಮಟ್ಟಿಸಿದ ಬೆಕ್ಕು ತನ್ನ ಒಡೆಯನಿಗೆ ಸ್ವಾಮಿ ನಿಷ್ಠೆ ಪ್ರದರ್ಶಿಸಿದೆ. ಇನ್ನೂ ಕೋತಿಗಳ ಆಕ್ರೋಶವನ್ನು ಕಂಡು ಸ್ವಲ್ಪ ಸಮಯ ಸಾಕಿದ ಬೆಕ್ಕು ಭಯ ಪಟ್ಟರು ನಂತರ ತನ್ನ ಪರಾಕ್ರಮ ತೋರಿಸಿದೆ. ಈ ಕಾಳಗ ಅಪರೂಪ ಮತ್ತು ವಿಸ್ಮಯವಾಗಿದ್ದು, ಅಕ್ಕ ಪಕ್ಕದ ಮನೆಯವರು ಈ ದೃಶ್ಯ ನೋಡಿ ಆಶ್ಚರ್ಯ ಪಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಮೂರು ಕೋತಿಗಳು ಬಂದಿದೆ. ಬಳಿಕ ಅವುಗಳನ್ನು ಸಾಕಿದ ಬೆಕ್ಕು ಅಡ್ಡಗಟ್ಟಿದ್ದು, ಮೂರು ಕೋತಿಗಳು ಒಂದೊಂದಾಗಿ ಬೆಕ್ಕಿನ ಮೇಲೆ ಹಲ್ಲೆ ಮಾಡಲು ಮುಂದಾಗಿವೆ. ಆಗ ಬೆಕ್ಕು ಹೆದರದೆ ಅವುಗಳನ್ನು ಹಿಮ್ಮೆಟ್ಟಿಸಿದೆ. ಸ್ವಲ್ಪ ಸಮಯದವರೆಗೂ ಕೋತಿಗಳು ಬೆಕ್ಕನ್ನು ಹೆದರಿಸಲು ಪ್ರಯತ್ನ ಮಾಡಿವೆ. ಆದರೆ ಕೊನೆಗೂ ಬೆಕ್ಕು ಮಾತ್ರ ಎಲ್ಲೂ ಜಗ್ಗದೇ ಮೂರು ಕೋತಿಗಳನ್ನು ಹಿಂದೆ ಓಡಿಸಿದೆ.

ಪ್ರೀತಿಯಿಂದ ಸಾಕಿದ ಬೆಕ್ಕು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮಕ್ಕಳನ್ನು ರಕ್ಷಣೆ ಮಾಡಿದೆ. ನಾವು ಪ್ರಾಣಿಗಳಿಗೆ ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು ಅವುಗಳು ಸದಾ ನಿಷ್ಠೆಯಿಂದ ಇರುತ್ತವೆ. ಮೂರು ಕೋತಿಗಳು ಬಂದರೂ ಅವುಗಳನ್ನು ಹಿಮ್ಮೆಟ್ಟಿದೆ. ನಿಜಕ್ಕೂ ಹೆಮ್ಮೆಯಾಗುತ್ತದೆ ಎಂದು ಮಾಲೀಕ ಹೇಳಿದ್ದಾರೆ.

https://www.youtube.com/watch?v=K-XagoOiOnY

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *