ಕೆಲವರಿಗಷ್ಟೇ ಧೈರ್ಯ ಇರುತ್ತೆ, ಆ ಧೈರ್ಯ ನಿನಗಿದೆ- ರಾಹುಲ್ ಕೊಂಡಾಡಿದ ಪ್ರಿಯಾಂಕ

ನವದೆಹಲಿ: ರಾಜೀನಾಮೆ ನಿರ್ಧಾರದ ಪತ್ರವನ್ನು ಬಹಿರಂಗವಾಗಿ ಪ್ರಕಟಿಸಿದ ರಾಹುಲ್ ಗಾಂಧಿ ಅವರನ್ನು ಸಹೋದರಿ ಪ್ರಿಯಾಂಕ ಗಾಂಧಿ ಕೊಂಡಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, ನಿನ್ನ ಧೈರ್ಯವನ್ನು ಪ್ರೀತಿಯಿಂದ ಗೌರವಿಸುವುದಾಗಿ ತಿಳಿಸಿದ್ದಾರೆ. ರಾಹುಲ್ ಗಾಂಧಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಗಾ ಅವರ ಈ ನಿಧಾರವನ್ನು ಮೆಚ್ಚಿ ಪ್ರಿಯಾಂಕ ಹೊಗಳಿದ್ದಾರೆ.

ಪ್ರಿಯಾಂಕ ಟ್ವೀಟ್ ನಲ್ಲೇನಿದೆ?
ಕೆಲವರಿಗಷ್ಟೇ ಧೈರ್ಯ ಇದೆ. ಆ ಧೈರ್ಯ ನಿನಗೆ ಇದೆ. ನಿನ್ನ ಈ ದಿಟ್ಟ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಬರೆದುಕೊಂಡು ರಾಹುಲ್ ಗಾಂಧಿಯವರಿಗೆ ಟ್ಯಾಗ್ ಮಾಡಿದ್ದಾರೆ.

49 ವರ್ಷದ ರಾಹುಲ್ ಗಾಂಧಿಯವರು ಬುಧವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿ, ರಾಜೀನಾಮೆ ಪತ್ರವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು.

ಪತ್ರದಲ್ಲೇನಿತ್ತು?
ಇಷ್ಟು ದಿನ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ. 2019ರ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷವನ್ನು ಸದೃಢಗೊಳಿಸಬೇಕಿದೆ. ಜನರಲ್ಲಿ ಪಕ್ಷದ ಮೇಲೆ ಭರವಸೆ ಮೂಡಿಸಬೇಕಿದೆ. ಪಕ್ಷಕ್ಕೆ ಪುನಶ್ಚೇತನ ನೀಡಬೇಕಿದೆ. ಹೀಗಾಗಿ ಈ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬೇಕಿದೆ. ಈವರೆಗೂ ಕಾಂಗ್ರೆಸ್ ದುಡಿಯುತ್ತಾ ಬಂದಿದೆ. ದೇಶಕ್ಕಾಗಿ ಕೆಲಸ ಮಾಡಲು ನನಗೆ ವೇದಿಕೆ ನಿರ್ಮಿಸಿಕೊಟ್ಟ ಕಾಂಗ್ರೆಸ್ ಪ್ರೀತಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕ ಕಾರಣ ನೀಡಿ ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಗೆ ನೂತನ ಸಾರಥಿ ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ. ಇತ್ತ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೇವಲ ಕಾಂಗ್ರೆಸ್ ಸದಸ್ಯ, ಸಂಸದ ಎಂಬುದನ್ನು ಉಳಿಸಿಕೊಂಡು ಪಕ್ಷದ ಅಧ್ಯಕ್ಷ ಪದಗಳನ್ನು ತೆಗೆದು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *