ಐಪಿಎಲ್ 2022ರ ಹರಾಜು ಪ್ರಕ್ರಿಯೆ ವೀಕ್ಷಿಸಿ ತುಂಬಾ ದಣಿದಿದ್ದೇನೆ: ಪ್ರೀತಿ ಜಿಂಟಾ

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ ನಿನ್ನೆ ನಡೆದ ಮೊದಲನೆಯ ದಿನದ ಐಪಿಎಲ್ ಹರಾಜು ಪ್ರಕ್ರಿಯೆಗೆ ಗೈರಾಗಿದ್ದು, ಮನೆಯಲ್ಲಿಯೇ ಕುಳಿತು ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗೆ ಮೆಗಾ ಹರಾಜನ್ನು ವೀಕ್ಷಿಸಿದ್ದಾರೆ.

ನಿನ್ನೆ ನಡೆದ ಮೊದಲನೆಯ ಐಪಿಎಲ್ ಹರಾಜನ್ನು ನೋಡಿದ ನಂತರ ತುಂಬಾ ದಣಿದಿದ್ದೇನೆ ಪೋಸ್ಟ್‌ವೊಂದನ್ನು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Preity G Zinta (@realpz)

ರಾತ್ರಿಯಿಡೀ ಎಚ್ಚರವಾಗಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ನೋಡಿದ ನಂತರ ನಾನು ತುಂಬಾ ದಣಿದಿದ್ದೇನೆ. ನಾಳೆಯವರೆಗೆ ನಮಗೆ ಬಹಳಷ್ಟು ಕೆಲಸಗಳಿವೆ. ಹೀಗಾಗಿ ಫೆಬ್ರವರಿ 13ನೇ ತಾರೀಖಿನ 2ನೇಯ ದಿನದ ಹರಾಜು ಪ್ರಕ್ರಿಯೆಯಲ್ಲಿಯೂ ಕೂಡಾ ನಾನು ಪಾಲ್ಗೊಳ್ಳಲಾಗುವುದಿಲ್ಲ. ಅಲ್ಲಿಯವರೆಗೆ ನೀವು ನಿಮ್ಮ ಕಾಳಜಿ ವಹಿಸಿ, ಸುರಕ್ಷಿತವಾಗಿರಿ. ಎನ್ ಚಕ್ ದೇ ಫಾಟ್ಟೆ ಅಂತ ಘೋಷ ವಾಕ್ಯದೊಂದಿಗೆ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

ಪ್ರತಿ ವರ್ಷ ಪ್ರೀತಿ ಜಿಂಟಾ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಆಟದ ಮೈದಾನದಲ್ಲಿ ಹುರಿದುಂಬಿಸುತ್ತಿರುತ್ತಾರೆ. ಆದರೆ ಅವರು ತಮ್ಮ ಅವಳಿ ಮಕ್ಕಳ ಪೋಷಣೆಯಲ್ಲಿ ತೊಡಗಿಕೊಂಡ ಕಾರಣದಿಂದಾಗಿ ಈ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.

ಐಪಿಎಲ್ ಹರಾಜು ಈ ವರ್ಷ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರೀತಿ ತಮ್ಮ ಅವಳಿ ಮಕ್ಕಳೊಂದಿಗೆ ಮುದ್ದಾದ ಸೆಲ್ಫಿಯೊಂದಿಗೆ ಐಪಿಎಲ್ 2022 ಹರಾಜಿನ ಬಗ್ಗೆ ತನ್ನ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

ಪ್ರೀತಿ ನಿನ್ನೆ ನಡೆದ ಮೆಗಾ ಹರಾಜನ್ನು ವೀಕ್ಷಿಸಲು ಸಿದ್ಧವಾಗುತ್ತಿದ್ದಂತೆ. ಈ ವರ್ಷ ತಮ್ಮ ಅವಳಿ ಮಕ್ಕಳು ಜೈ ಜಿಂಟಾ ಹಾಗೂ ಜಿಯಾ ಜಿಂಟಾ ಐಪಿಎಲ್ ಹರಾಜು ಪ್ಯಾಡಲ್ ಅನ್ನು ಬದಲಾಯಿಸಲಿವೆ ಎಂದು ತಮಾಷೆ ಮಾಡಿದ್ದಾರೆ.

 

View this post on Instagram

 

A post shared by Preity G Zinta (@realpz)

ಇಂದು ರಾತ್ರಿ ಟಾಟಾ ಐಪಿಎಲ್‍ನ ಎರಡನೇ ಮೆಗಾ ಹರಾಜನ್ನು ವೀಕ್ಷಿಸಲು ನಾನೂ ಸಿದ್ಧವಾಗಿದ್ದೇನೆ. ಆದರೆ ಕುಟುಂಬದ ಕೆಲ ಜವಾಬ್ದಾರಿಗಳಿಂದಾಗಿ ಪಂಜಾಬ್ ತಂಡದ ಪರ ಹರಾಜು ನಡೆಸುವ ಬದಲಿಗೆ ನನ್ನ ತೋಳುಗಳಲ್ಲಿ ಮುದ್ದಾದ ಮಗುವನ್ನು ಎತ್ತಿಕೊಂಡು ಅದರ ಪೋಷಣೆಯಲ್ಲಿ ತೊಡಗಿಕೊಂಡಿದ್ದೇನೆ. ಈ ವರ್ಷದ ನಮ್ಮ ಪಂಜಾಬ್ ರಾಜರ ಆಟವನ್ನು ನಾನು ನನ್ನ ಇಬ್ಬರು ಮುದ್ದಾದ ಮಕ್ಕಳೊಂದಿಗೆ ವೀಕ್ಷಿಸಲು ಬಹಳ ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: IPL Auction -15.25 ಕೋಟಿಗೆ ಇಶಾನ್ ಕಿಶನ್ ಸೇಲ್‌

ಇನ್‍ಸ್ಟಾಗ್ರಾಮ್‍ನ ಮೊದಲ ಪೋಸ್ಟ್‌ನಲ್ಲಿ ಪ್ರೀತಿಯವರು ಕಪ್ಪು ಕನ್ನಡಕದೊಂದಿಗೆ ಬಿಳಿಯ ಟಿ-ಶರ್ಟ್ ಅನ್ನು ಧರಿಸಿದ್ದು, ತಮ್ಮ ಗುಳಿ ಕೆನ್ನೆಯೊಂದಿಗೆ ಮುದ್ದಾದ ನಗೆಯನ್ನು ಬೀರಿದ್ದಾರೆ. ಎರಡನೇ ಪೋಸ್ಟ್‌ನಲ್ಲಿ ತಮ್ಮ ಶಿಶುವನ್ನು ಬಿಳಿಯ ವಸ್ತ್ರದೊಂದಿಗೆ ಬೆಚ್ಚಗೆ ಇರಿಸಿ ತಮ್ಮ ಎದೆಯ ಮೇಲೆ ಮಲಗಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *