ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

ಟೆಹ್ರಾನ್/ಟೆಲ್ ಅವೀವ್: ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಇದರ ನಡುವೆಯೂ ಭಾರತ (India) ತಟಸ್ಥವಾಗಿದೆ. ಆದರೆ ಯುದ್ಧದ ಪರಿಣಾಮದಿಂದಾಗಿ ದಿನಗಳೆದಂತೆ ಭಾರತಕ್ಕೆ ಆತಂಕ ಹೆಚ್ಚಾಗುತ್ತಿದೆ.

ಭಾರತ ಎರಡೂ ರಾಷ್ಟ್ರಗಳ ವಿಚಾರದಲ್ಲಿ ತನ್ನ ನಿಲುವನ್ನು ತಟಸ್ಥವಾಗಿರಿಸಿದೆ. ಯಾವುದೇ ದೇಶಕ್ಕೆ ಬೆಂಬಲ ಸೂಚಿಸಿದರೂ ಅಷ್ಟೇ, ಯುದ್ಧ ನಡೆದರೂ ಅಷ್ಟೇ ಭಾರತಕ್ಕೆ ಆರ್ಥಿಕ ಹೊಡೆತ ಆಗುವುದು ಖಂಡಿತ ಎನ್ನುವ ಪರಿಸ್ಥಿತಿಯಿದೆ.ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

ಈ ಕುರಿತು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಪಕರು ಎಸ್.ಆರ್ ಕೇಶವ ಮಾತನಾಡಿ, ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ವಿವರಿಸಿದ್ದಾರೆ.

ಪರಿಣಾಮಗಳೇನು?
– ಹರಿಯಾಣ, ಪಂಜಾಬ್‌ನಿಂದ 30%-35%ರಷ್ಟು ಬಾಸುಮತಿ ಅಕ್ಕಿ ಇರಾನ್‌ಗೆ ರಫ್ತಾಗುತಿತ್ತು. ಸದ್ಯ ಇದಕ್ಕೆ ತಡೆಯಾಗುವ ಸಾಧ್ಯತೆಯಿದ್ದು, ಹಣದ ವಹಿವಾಟಿಗೆ ಇನ್ನೂ 6 ತಿಂಗಳು ಬೇಕಾಗಬಹುದು.

– ಗಲ್ಫ್ ಆಫ್ ಉಮಾನ್, ರೆಡ್ ಸೀ, ಹರ್ಮೂಜ್ ಜಲಸಂಧಿಯಲ್ಲಿ ಸಬ್‌ಮರೀನ್ ಕೇಬಲ್‌ಗಳನ್ನು ಹಾಕಲಾಗಿದೆ. ಇದರಿಂದಲೇ 95% ಗ್ಲೋಬಲ್ ಇಂಟರ್‌ನೆಟ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇವುಗಳಿಂದ ಸೌತ್‌ಈಸ್ಟ್ ದೇಶಗಳಿಗೆ ಡಿಫೆನ್ಸ್, ಬ್ಯಾಂಕಿಂಗ್‌ನಲ್ಲಿ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಕೇಬಲ್‌ಗಳಿಗೆ ಸಮಸ್ಯೆ ಆದರೆ ದೊಡ್ಡಮಟ್ಟದ ಹಾನಿಯಾಗುವ ಆತಂಕ ಉಂಟಾಗಿದೆ.

– ಇರಾನ್ ಪೋರ್ಟ್‌ನಲ್ಲಿ ಭಾರತ 80 ಬಿಲಿಯನ್ ಹೂಡಿಕೆ ಮಾಡಿದ್ದು, ಆತಂಕ ಹೆಚ್ಚಾಗಿದೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯ ಬಳಿಕ ಇರಾನ್ ಸಿಡಿದೆದ್ದಿದೆ. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೂ ಹಾನಿಯಾಗಿದೆ. ಎರಡು ರಾಷ್ಟ್ರಗಳಿಗೂ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಎರಡು ರಾಷ್ಟಗಳಿಂದ ಭಾರತ ಆಮದು ರಫ್ತನ್ನು ಹೊಂದಿದ್ದು, ಬೆಂಬಲ ಮಾತ್ರ ಯಾವುದೇ ರಾಷ್ಟ್ರಕ್ಕೂ ಘೋಷಿಸಿಲ್ಲ.ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ