ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

ಮುಂಬೈ: ದಂಗಲ್ ನಟಿ ಫಾತಿಮಾ ಸನಾ ಶೇಕ್ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

 

ಇತ್ತೀಚೆಗೆ ಫಾತಿಮಾ ಮುಂಬೈನಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ತೆಗೆಯಲಾಗಿದ್ದು, ನಟಿಯ ಕಣ್ಣಿನ ಹುಬ್ಬು ಭಾಹಶಃ ಶೇವ್ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಫಾತಿಮಾ ಸಹನಟರಾದ ಆಮಿರ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಜೊತೆ ಫೋಟೋಗಳಿಗೆ ಪೋಸ್ ನೀಡಿದ್ದು, ಇದರಲ್ಲಿಯೂ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿರೋದನ್ನ ಕಾಣಬಹುದು. ಚಿತ್ರದ ಸೆಟ್‍ನಲ್ಲಿ ತೆಗೆಯಲಾದ ಫೋಟೋಗಳನ್ನ ಫಾತಿಮಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಫಾತಿಮಾ ಹುಬ್ಬನ್ನು ಶೇವ್ ಮಾಡಿಸಿರಬಹುದು ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ.

https://www.instagram.com/p/Be2XgWVnkRs/?utm_source=ig_embed

ಕೆಲವು ದಿನಗಳ ಹಿಂದೆ ಫಾತಿಮಾ, ಕತ್ರೀನಾ ಹಾಗೂ ಆಮಿರ್ ಹಾಡೊಂದರ ಚಿತ್ರೀಕರಣದ ವೇಳೆ ತೆಗೆದ ಫೋಟೋ ಲೀಕ್ ಆಗಿತ್ತು. ಈ ಹಿಂದೆ ಚಿತ್ರದಲ್ಲಿನ ಆಮಿರ್ ಖಾನ್ ಲುಕ್ ನ ಫೋಟೋ ಕೂಡ ಲೀಕ್ ಆಗಿತ್ತು. ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಡದ ಚಿತ್ರತಂಡ ಫೋಟೋಗಳು ಲೀಕ್ ಆದ ಬಳಿಕ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಸೆಟ್‍ನಲ್ಲಿ ಫೋನ್ ನಿಷೇಧಿಸಲಾಗಿತ್ತು. ಹಾಗೂ ಸೆಟ್‍ಗೆ ಭೇಟಿ ನೀಡುವವರಿಗೂ ನಿರ್ಬಂಧವಿತ್ತು.

https://www.instagram.com/p/Be2bPc4Hai_/?taken-by=fatimasanashaikh

 ಥಗ್ಸ್ ಆಫ್ ಹೊಂದೊಸ್ತಾನ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು, ಇದೇ ವರ್ಷ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಧೂಮ್ 3 ನಿರ್ದೇಶಕ ವಿಜಯ್ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್‍ನಲ್ಲಿ ಚಿತ್ರ ಮೂಡಿಬಂದಿದೆ. 1839ರ ‘ಕನ್ಫೆಷನ್ಸ್ ಆಫ್ ಎ ಥಗ್’ ಎಂಬ ಕಾದಂಬರಿಯನ್ನ ಆಧರಿಸಿದ ಚಿತ್ರವಾಗಿದೆ.

Comments

Leave a Reply

Your email address will not be published. Required fields are marked *