ಪೋರ್ನ್ ವಿಡಿಯೋ ತೋರಿಸಿ ತಂದೆಯಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಮುಂಬೈ: 30 ವರ್ಷದ ಮಲತಂದೆಯೊಬ್ಬ ಅಪ್ರಾಪ್ತ ಹೆಣ್ಣುಮಕ್ಕಳಿಬ್ಬರಿಗೆ ಪೋರ್ನ್ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

ಆರೋಪಿಯನ್ನು ಒಶಿವಾರ್ ಪೊಲೀಸರು ಬಂಧಿಸಿದ್ದಾರೆ. 13 ಮತ್ತು 14 ವರ್ಷದ ಅಪ್ರಾಪ್ತ ಮಕ್ಕಳ ತಂದೆ 2018 ರಲ್ಲಿ ಮೃತಪಟ್ಟಿದ್ದರು. ಕೆಲವು ತಿಂಗಳುಗಳ ಹಿಂದೆ ಆರೋಪಿಯನ್ನು ಸಂತ್ರಸ್ತೆಯರ ತಾಯಿ ಎರಡನೇ ಮದುವೆಯಾಗಿದ್ದರು. ಮದುವೆಯಾದ ನಂತರ ಎಲ್ಲರು ಒಟ್ಟಿಗೆ ಜೋಗೇಶ್ವರಿಯಲ್ಲಿ ವಾಸಿಸುತ್ತಿದ್ದರು.

ಮದುವೆಯಾದ ಕೆಲವು ದಿನಗಳ ನಂತರ ಆರೋಪಿ ಇಬ್ಬರು ಹೆಣ್ಣುಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಸಂತ್ರಸ್ತೆಯರು ನಿದ್ದೆ ಮಾಡುವಾಗ ಅವರ ಮೇಲೆ ಆರೋಪಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

ಆರೋಪಿ ತಂದೆ ಏಪ್ರಿಲ್ 21 ರಂದು ಸಂತ್ರಸ್ತೆಯರು ನಿದ್ದೆ ಮಾಡುವಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆಯರು ಎಚ್ಚರಗೊಂಡು ಕೂಗಾಡಲು ಶುರು ಮಾಡಿದ್ದಾರೆ. ಆಗ ಆರೋಪಿ ಚಾಕು ತೋರಿಸಿ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಇಬ್ಬರಿಗೂ ಬೆದರಿಕೆವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಅವರಿಬ್ಬರಿಗೂ ತನ್ನ ಫೋನಿನಲ್ಲಿ ಪೋರ್ನ್ ವಿಡಿಯೋವನ್ನು ಬಲವಂತವಾಗಿ ತೋರಿಸುತ್ತಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದನು. ಸತತ ಒಂದು ತಿಂಗಳು ಇದೇ ರೀತಿ ಅವರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಘಟನೆ ನಡೆದು ಕೆಲವು ದಿನಗಳ ನಂತರ ಸಂತ್ರಸ್ತೆ ತನ್ನ ಟ್ಯೂಷನ್ ಶಿಕ್ಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ನಂತರ ಶಿಕ್ಷಕ ಎನ್‍ಜಿಒ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ್ದಾರೆ. ಅವರು ಒಶಿವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *