ಮಗ ಲವ್ ಮಾಡಿ ಮದುವೆ ಆಗಿದ್ದಕ್ಕೆ ಪ್ರಾಣ ಕಳೆದುಕೊಂಡ ತಂದೆ!

ಶಿವಮೊಗ್ಗ: ಮಗ ಲವ್ ಮಾಡಿ ಮದುವೆ ಆಗಿದ್ದಕ್ಕೆ ತಂದೆ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದ ದಶರಥ ಎಂಬ ಯುವಕ ಪಕ್ಕದ ಮಾರಶೆಟ್ಟಿ ಹಳ್ಳಿಯ ಸಿಂಧು ಎಂಬ ಯುವತಿಯನ್ನು ಲವ್ ಮಾಡಿ, ಆಕೆಯೊಂದಿಗೆ ನಾಪತ್ತೆ ಆಗಿದ್ದ. ದಶರಥ ಎಲ್ಲಿದ್ದಾನೆ ಎಂದು ತಿಳಿಸುವಂತೆ ಆತನ ತಂದೆ ಕುಮಾರಪ್ಪ ಹಾಗೂ ನೀಲಾವತಿಗೆ ಹೊಳೆಹೊನ್ನೂರು ಪೊಲೀಸರು ಹಾಗೂ ಸಿಂಧು ಮನೆಯವರು ಕಿರುಕುಳ ನೀಡಿದ್ದರು.

ಇವರ ಟಾರ್ಚರ್ ತಾಳಲಾಗದೆ ಕುಮಾರಪ್ಪ ಹಾಗೂ ನೀಲಾವತಿ ಕಳೆದ ವಾರ ವಿಷ ಸೇವಿಸಿದ್ದರು. ತೀವ್ರವಾಗಿ ಆಸ್ವಸ್ಥಗೊಂಡಿದ್ದ ಇವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕುಮಾರಪ್ಪ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ಇತ್ತ ನಾಪತ್ತೆಯಾಗಿದ್ದ ಯುವ ಜೋಡಿ ಬೆಂಗಳೂರಿನ ಓಂಶಕ್ತಿ ದೇವಾಲಯದಲ್ಲಿ ಮದುವೆ ಆಗಿ ಬಂದಿದ್ದಾರೆ. ಪ್ರಾಣ ಬೆದರಿಕೆ ಇರುವುದರಿಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಕೊಟ್ಟು, ಪೊಲೀಸ್ ರಕ್ಷಣೆಯಲ್ಲಿ ಗ್ರಾಮಕ್ಕೆ ಮರಳಿ ಹೋಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

Comments

Leave a Reply

Your email address will not be published. Required fields are marked *