‘ಅನ್ಯ ಜಾತಿ ಹುಡುಗನನ್ನೇ ಮದ್ವೆ ಆಗ್ತೀನಿ’ – ಹಠ ಹಿಡಿದ ಮಗಳನ್ನು ಹತ್ಯೆಗೈದ ತಂದೆ

ಚಂಡೀಗಢ: ತಾನು ಆಯ್ಕೆ ಮಾಡಿದ ಹುಡುಗನನ್ನು ಬಿಟ್ಟು, ಪ್ರೀತಿಸಿದ್ದ ಅಂತರ್ಜಾತಿಯವನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರಿಯಾಣದ ಸಿಂಘು ಬಾರ್ಡರ್ ನ ಗ್ರಾಮವೊಂದರಲ್ಲಿ ನಡೆದಿದೆ.

ಯುವತಿಯ ಕುಟುಂಬದವರಿಗೆ ಆ ಪ್ರದೇಶದ ಯುವಕರನ್ನು ಮದುವೆಯಾಗುವದು ಇಷ್ಟವಿರಲಿಲ್ಲ. ಎಷ್ಟು ಹೇಳಿದರೂ ಮಗಳು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಹೀಗಾಗಿ ಸಿಟ್ಟಿಗೆದ್ದ ತಂದೆ ಮಗಳನ್ನೇ ಕೊಲೆ ಮಾಡಿದ್ದಾನೆ.

ಪೊಲೀಸರು ವಿಚಾರಣೆ ನಡೆಸಿದ ಪ್ರಕಾರ, ಕಳೆದ ವಾರವಷ್ಟೇ ಆಕೆಗೆ ತಕ್ಕ ಹುಡುಗನನ್ನು ಪೋಷಕರು ನಿಶ್ಚಯಿಸಿದ್ದರು. ಆದರೆ, ಯುವತಿಯು ಆ ಹುಡುಗನನ್ನು ಮದುವೆಯಾಗಲು ನಿರಾಕರಿಸಿ, ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಇದೇ ವಿಕೋಪಕ್ಕೆ ತಿರುಗಿ ತಂದೆ ಕೋಪಗೊಂಡಿದ್ದಾನೆ.

ಈ ಸಂದರ್ಭದಲ್ಲಿ ಯುವತಿಯ ತಾಯಿಯು ಸಹ ಅವಳಿಗೆ ಇಷ್ಟವಿಲ್ಲದಿದ್ದರೆ ಬಿಡಿ, ಆಕೆಯ ಇಷ್ಟದಂತೆ ಅವಳು ಪ್ರೀತಿಸಿದವನಿಗೇ ಮದುವೆ ಮಾಡಿ ಕೊಟ್ಟರಾಯಿತು ಎಂದು ಸಮಾಧಾನ ಪಡಿಸಿದ್ದಾಳೆ. ಆದರೆ, ಪತ್ನಿಯ ಮಾತನ್ನು ಕೇಳದ ತಂದೆ ಯುವತಿ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದನ್ನು ಅರಿಯದ ಯುವತಿಯ ತಾಯಿ ಮಗಳ ಸಾವಿನ ಕುರಿತು ಶವ ಸಂಸ್ಕಾರದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಾಯಿಯ ದೂರಿನ ಹಿನ್ನಲೆ ಪೊಲೀಸರು ತನಿಖೆ ನಡೆಸಿದ್ದು, ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ವಿಚಾರಣೆಗಾಗಿ ಯುವತಿಯ ಕುಟುಂಬದ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *