ಮಾವನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಳಿಯ, ಆತನ ಗ್ಯಾಂಗ್ ಅರೆಸ್ಟ್

ಬೆಳಗಾವಿ/ಚಿಕ್ಕೋಡಿ: ಮಾವನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಳಿಯ ಹಾಗೂ ಆತನ ಗೆಳೆಯರು ಸೇರಿ 7 ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಸಿದ್ದಪ್ಪ ರಾಮಪ್ಪ ಖದ್ದಿ ಈತನನ್ನು ಖದೀಮರು ಅಪರಿಸಿಕೊಂಡು 10 ಲಕ್ಷ ರೂ. ಹಣ ನೀಡಿದರೆ ಬಿಡುವುದಾಗಿ ಹೆದರಿಕೆ ಹಾಕಿ ಅಪಹರಿಸಿಕೊಂಡು ಹೋಗಿದ್ದನು. 11 ಜನ ಆರೋಪಿಗಳಲ್ಲಿ 7 ಜನರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

ಜೋಡಕುರಳಿ ಗ್ರಾಮದ ಮುಖಂಡ ಮುತ್ತೆಪ್ಪ ಪೊನ್ನಪ್ಪಾ ಪೂಜೇರಿ ಈತನ ಅಳಿಯ ಸಿದ್ದಪ್ಪ ರಾಮಪ್ಪ ಖದ್ದಿ ಈತನನ್ನು ಕಳೆದ ಮಾರ್ಚ್ 18ರಂದು ಕ್ರೂಸರ್ ವಾಹನದಲ್ಲಿ ಅಪಹರಿಸಿಕೊಂಡು 10 ಲಕ್ಷ ರೂ. ಕೊಟ್ಟಲ್ಲಿ ಬಿಡುವುದಾಗಿ ಹೆದರಿಕೆ ಹಾಕಿ ಅಪಹರಿಸಿಕೊಂಡು ಹೋಗಿದ್ದರು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರು 11 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು 7 ಜನರನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹಾರೂಗೇರಿ ಪಟ್ಟಣದ ಸಂಜು ಹಣಮಂತ ಓಲೆಕಾರ, ರಾಯಭಾಗ ಪಟ್ಟಣದ ಯಶವಂತ ಚಲವಾದಿ, ಹಿಡಕಲ್ ಗ್ರಾಮದ ಶ್ರೀಧರ ರಾಮಚಂದ್ರ ಮಾಳಿ, ಹಾರೂಗೇರಿಯ ಕರೆಪ್ಪ ಮಾಯಪ್ಪ ಗಡ್ಡಿ, ಮಂಜು ಹಣಮಂತ ಓಲೇಕರ, ಲಗಮನ್ನಾ ಖದ್ದಿ, ಯಲ್ಲಪ್ಪ ದುಗ್ಗಾಣಿ, ವಿಠ್ಠಲ ಯಂಡ್ರಾವಿ, ಸಾವಂತ ಮಾರುತಿ ಸೌದತ್ತಿ ಬಂಧಿಸಿದ ಆರೋಪಿಗಳು. ಬಂಧಿತರಿಂದ ಒಂದು ಕ್ರಿಸರ್ ವಾಹನ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *