ಹಾಸನ : ಮಗಳನ್ನು ದಾರಿಯಲ್ಲಿ ಅನವಶ್ಯಕವಾಗಿ ಮಾತನಾಡಿಸದಂತೆ ಬುದ್ಧಿ ಹೇಳಿದ ತಂದೆ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಆತನ ಸ್ನೇಹಿತ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.
ಕಳೆದ ಒಂದು ತಿಂಗಳ ಹಿಂದೆ ಬಾಲಕಿಯ ತಂದೆ ತಮ್ಮ ಮಗಳನ್ನು ಅನವಶ್ಯಕವಾಗಿ ಮಾತನಾಡಿಸಿ ಕಿರಿಕಿರಿ ಉಂಟು ಮಾಡುತ್ತಿದ್ದ ಅರ್ಜುನ್‍ಗೆ ಬುದ್ದಿವಾದ ಹೇಳಿದ್ದರು. ಇದೇ ವಿಷಯವಾಗಿ ಬಾಲಕಿಯ ತಂದೆ ಮತ್ತು ಯುವಕ ಅರ್ಜುನ್‍ನ ನಡುವೆ ಗಲಾಟೆಯಾಗಿತ್ತು. ಇದೇ ದ್ವೇಷ ಇಟ್ಟುಕೊಂಡಿದ್ದ ಅರ್ಜುನ್ ತನ್ನ ಸ್ನೇಹಿತ ಹಾಗೂ ಗ್ರಾಮಪಂಚಾಯಿತಿ ಸದಸ್ಯನಾಗಿದ್ದ ಕಾರ್ತಿಕ್ ಜೊತೆ ಸೇರಿಕೊಂಡು ಶುಕ್ರವಾರ ರಾತ್ರಿ ಬಾಲಕಿಯ ತಂದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮದುವೆ ವೇಳೆ ವಧುವಿನ ಅಂದ ಹೆಚ್ಚಿಸುವ ಕೇಶ ವಿನ್ಯಾಸಗಳು

ಘಟನೆಯಲ್ಲಿ ಬಾಲಕಿಯ ತಂದೆ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಇದೀಗ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ
https://www.youtube.com/watch?v=ECdScsutINc

Leave a Reply