12ರ ಬಾಲಕಿ ಮೇಲೆ 30 ಮಂದಿ ಅತ್ಯಾಚಾರ – ನೀಚಕೃತ್ಯಕ್ಕೆ ತಂದೆಯ ಸಾಥ್

ತಿರುವನಂತಪುರಂ: ತಂದೆಯ ಸಹಕಾರದಿಂದ 30 ಮಂದಿ ಕಾಮುಕರು, 12 ವರ್ಷದ ಬಾಲಕಿ ಮೇಲೆ ಸತತ ಎರಡು ವರ್ಷದಿಂದ ಅತ್ಯಾಚಾರ ಎಸಗುತ್ತಿರುವ ಆಘಾತಕಾರಿ ಪ್ರಕರಣವೊಂದು ದೇವರ ನಾಡು ಕೇರಳದಲ್ಲಿ ಬೆಳಕಿಗೆ ಬಂದಿದೆ.

ಮಲಪ್ಪುರಂನ ಚೆಲರಿ ಪ್ರದೇಶದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪದೇ ಪದೇ ಆಕೆ ಶಾಲೆಗೆ ಗೈರಾಗುತ್ತಿದ್ದಳು. ಇದನ್ನು ಗಮನಿಸಿದ ಶಿಕ್ಷಕರು ಶನಿವಾರ ಬಾಲಕಿ ಶಾಲೆಗೆ ಬಂದಾಗ ಪ್ರಶ್ನಿಸಿದಾಗ ಸತ್ಯಾಂಶ ಹೊರಬಿದ್ದಿದೆ. ತಂದೆಯೇ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರೋಪಿಗಳಿಗೆ ಕುಮ್ಮಕ್ಕು ನೀಡುತ್ತಿದ್ದರು ಎಂದು ಬಾಲಕಿ ಹೇಳಿದ್ದಾಳೆ. ಅಲ್ಲದೆ ಸತತ 2 ವರ್ಷಗಳಿಂದ 30 ಮಂದಿ ಬಾಲಕಿಯ ಮೇಲೆ ಅತ್ಯಾಚಾರವೆಸೆಗಿದ್ದಾರೆ ಎಂಬ ನಿಜಾಂಶವನ್ನು ಬಾಲಕಿ ಶಿಕ್ಷಕರ ಬಳಿ ಬಿಚ್ಚಿಟ್ಟಿದ್ದಾಳೆ.

 

ಸಂತ್ರಸ್ತೆ ಅವರ ಕುಟುಂಬದಲ್ಲಿದ್ದ ಏಕೈಕ ಹೆಣ್ಣು ಮಗಳಾಗಿದ್ದು, ಕುಟುಂಬಸ್ಥರೊಂದಿಗೆ ಆಕೆ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದಳು. ಕಳೆದ ಎರಡು ವರ್ಷಗಳಿಂದ ತಂದೆಯ ಸ್ನೇಹಿತರು ಆಗಾಗ ಮನೆಗೆ ಬರುತ್ತಿದ್ದರು. ಅವರು ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು. ಇದಕ್ಕೆ ತಂದೆ ಕೂಡ ಬೆಂಬಲ ನೀಡುತ್ತಿದ್ದರು. ಸ್ನೇಹಿತರು ಮನೆಗೆ ಬಂದಾಗಲೆಲ್ಲಾ ತಂದೆ ನನಗೆ ಶಾಲೆಗೆ ಹೋಗಬೇಡ ಎಂದು ತಡೆಯುತ್ತಿದ್ದರು ಎಂದು ಬಾಲಕಿ ಹೇಳಿರುವುದಾಗಿ ಮಕ್ಕಳ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿಯನ್ನು ಮಲಪ್ಪುರಂನ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಬಳಿಕ ಅಲ್ಲಿಂದ ಆಕೆಯನ್ನು ಆಶ್ರಯ ನಿವಾಸಕ್ಕೆ ಕರೆದೊಯ್ಯಲಾಯಿತು. ಈ ಸಂಬಂಧ ತಿರುರಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಂದೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳ ಮೇಲೆ ಪೋಸ್ಕೋ ಕಾಯ್ದೆ ಅಡಿಯಲ್ಲಿ ಹಲವು ಕೇಸ್‍ಗಳನ್ನು ದಾಖಲಿಸಲಾಗಿದೆ. ಅಲ್ಲದೆ ಉಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *