ಬೆಂಗಳೂರು: ನನ್ನ ಮಗಳನ್ನು ಸಹೋದರನ ಮಗಳು ಸಲಿಂಗ ಕಾಮಕ್ಕೆ ಬಳಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಹೋದರನ ಮಗಳು ಕಾವ್ಯಾ (ಹೆಸರು ಬದಲಾಯಿಸಲಾಗಿದೆ) ಬುಲೆಟ್ ಓಡಿಸ್ತಾಳೆ, ಕುಡಿತಾಳೆ ಅವಳು ಹೋಲಿಕೆ ಕೂಡ ಗಂಡಸಿನಂತಿದೆ. ಗಂಡಸರ ರೀತಿ ಪ್ಯಾಂಟ್ ಶರ್ಟ್ ಹಾಕ್ತಾಳೆ ಗಂಡಸಿನ ವರ್ತನೆ ಮಾಡೋ ಆಕೆಯ ಬಲೆಗೆ ನನ್ನ ಮಗಳು ಭವ್ಯಾ (ಹೆಸರು ಬದಲಾಯಿಸಲಾಗಿದೆ) ಬಿದ್ದಿದ್ದಾಳೆ. ಮಗಳ ಜೊತೆ ಸಲಿಂಗಕಾಮವನ್ನು ನಡೆಸುವುದು ಅಲ್ಲದೇ ನನ್ನ ಮಗಳನ್ನೇ ಮದ್ವೆ ಮಾಡಿಕೊಳ್ತೀನಿ ಎಂದು ಹೇಳಿದ್ದಾಳೆ ಎಂದು ಭವ್ಯಾಳ ತಂದೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!-ಹುಡುಗನ ಮೇಲೆ ಹುಡುಗರಿಂದಲೇ ಅತ್ಯಾಚಾರ
ನನ್ನ ಮಗಳ ಮನಸ್ಸನ್ನು ಹಾಳು ಮಾಡಿ ಒಂದೇ ಮನೆಯಲ್ಲಿ ಇಬ್ಬರೂ ಒಂದೇ ಮನೆಯಲ್ಲಿ ಸಂಸಾರ ಮಾಡ್ತಿದ್ದಾರೆ. ಇಬ್ಬರು ಜೊತೆಯಲ್ಲಿಯೇ ಇರೋದ್ರಿಂದ ಭವ್ಯಾ ಅವಳನ್ನು ಬಿಟ್ಟು ಬರುತ್ತಿಲ್ಲ. ನನ್ನ ಮಗಳನ್ನು ನನಗೆ ಕೊಡಿ ಅಂತ ದಿನ ಕಳೆದರೆ ಪೊಲೀಸ್ ಠಾಣೆ, ಕಚೇರಿಯಲ್ಲಿ ಮಗಳಿಗಾಗಿ ಭವ್ಯಳ ತಂದೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಭವ್ಯಾಳ ತಂದೆ ವನಿತಾ ಸಹಾಯವಾಣಿಗೆ ದೂರು ನೀಡಿದ್ದಾರೆ.

ಇಬ್ಬರು ಯುವತಿಯರು ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಎಂಜಿನಿಯರಿಂಗ್ ಉದ್ಯೋಗದಲ್ಲಿದ್ದಾರೆ. ವನಿತಾ ಸಹಾಯವಾಣಿ ಸಿಬ್ಬಂದಿ ಇಬ್ಬರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಆರೋಪಿಯ ಅರೆಸ್ಟ್


Leave a Reply