ಧೋನಿಯ ಶರವೇಗದ ಸ್ಟಂಪಿಂಗ್ – ವೈರಲ್ ಆಗಿದೆ ವಿಡಿಯೋ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವಿಂಡೀಸ್ ವಿರುದ್ಧದ 4ನೇ ಪಂದ್ಯದ ವೇಳೆ  ಶರವೇಗದಲ್ಲಿ ಸ್ಟಂಪಿಂಗ್ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.

28 ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಎಸೆದ ಬಾಲ್ ಅನ್ನು ಎದುರಿಸಲು ಕೀಮೋ ಪೌಲ್ ಯತ್ನಿಸಿದ್ದರು. ಆದರೆ ಬ್ಯಾಟ್‍ನಿಂದ ತಪ್ಪಿಸಿಕೊಂಡ ಬಾಲ್ ಧೋನಿ ಕೈಗೆ ಸಿಕ್ಕಿತು. ತಕ್ಷಣವೇ ಪೌಲ್ ಹಿಂದೆ ಸರಿಯುವಷ್ಟರಲ್ಲೇ ಧೋನಿ ಸ್ಟಂಪ್ ಮಾಡಿದ್ದರು. ಧೋನಿ ಸ್ಟಂಪ್ ಮಾಡಿದ್ದನ್ನು ನೋಡಿದ ಪೌಲ್ ಅಂಪೈರ್ ತೀರ್ಮಾನವನ್ನು ಕಾಯದೇ ಪೆವಿಲಿಯನ್ ಕಡೆ ಮುಖ ಮಾಡಿದ್ದರು. ಧೋನಿಯವರ ಸ್ಟಂಪಿಂಗ್ ನೋಡಿ ಬೌಲರ್ ರವೀಂದ್ರ ಜಡೇಜಾ ಸಹ ಕ್ಷಣಕಾಲ ದಂಗಾಗಿದ್ದರು.

ಬಿಗ್ ಸ್ಕ್ರೀನ್‍ಗಳಲ್ಲಿ ಧೋನಿಯವರ ಸ್ಟಂಪಿಂಗ್ ರಿಪ್ಲೇ ಮೂಲಕ ವೀಕ್ಷಿಸಿದಾಗ, ಅವರು ಕೇವಲ 0.08 ಸೆಕೆಂಡ್‍ಗಳಲ್ಲೇ ಪೌಲ್ ರನ್ನು ಔಟ್ ಮಾಡಿದ್ದರು. ಧೋನಿಯವರ ಚಾಕಚಕ್ಯತೆಗೆ ಅಭಿಮಾನಿಗಳು ಫುಲ್ ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

331 ಏಕದಿನ ಪಂದ್ಯ ಆಡಿರುವ ಧೋನಿ 115 ಸ್ಟಂಪ್ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಕುಮಾರ ಸಂಗಕ್ಕರ 99 ಸ್ಟಂಪಿಂಗ್ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಧೋನಿ ಕ್ಯಾಚ್, ಸ್ಟಂಪ್ ಸೇರಿ 804 ಆಟಗಾರರನ್ನು ಔಟ್ ಮಾಡಿದ್ದಾರೆ. ಇದರಲ್ಲಿ 619 ಕ್ಯಾಚ್ ಹಾಗೂ 185 ಸ್ಟಂಪಿಂಗ್ ಒಳಗೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/ghanta_10/status/1056918554455539712

Comments

Leave a Reply

Your email address will not be published. Required fields are marked *