ಅಧಿವೇಶನಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ರೈತರು

-ಬೊಮ್ಮಾಯಿ ಸರ್ಕಾರಕ್ಕೆ ರೈತರ ಮಹಾ ದಿಗ್ಬಂಧನ

ಬೆಂಗಳೂರು: ಇಂದಿನಿಂದ ಹತ್ತುದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮೊದಲ ಅಧಿವೇಶನ ದಿನವೇ 2 ಸಾವಿರಕ್ಕೂ ಅಧಿಕ ರೈತರು ಸರ್ಕಾರಕ್ಕೆ ಮಹಾ ದಿಗ್ಬಂಧನ ಹಾಕಲು ಸಜ್ಜಾಗಿದ್ದಾರೆ.

ನಿಷೇಧಾಜ್ಞೆ ಇದ್ರೂ ಡೋಂಟ್ ಕೇರ್ ಎನ್ನುತ್ತಿರುವ ರೈತರು, ನಾವು ಕ್ರಿಮಿನಲ್ಸ್ ಅಲ್ಲ. ಏನೇ ಆದ್ರೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ. ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಧಾನಸೌಧ ಚಲೋ ಪ್ರತಿಭಟನಾ ರ್‍ಯಾಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

ಸಿಟಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರಾಯಣ್ಣ ಸರ್ಕಲ್, ಆನಂದರಾವ್ ಸರ್ಕಲ್ ಮೂಲಕ ವಿಧಾನಸೌಧಕ್ಕೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಸುಮಾರು 7 ರಿಂದ 8 ಸಾವಿರ ರೈತರು ಪ್ರತಿಭಟನೆಯಲ್ಲಿ ಭಾಗಿ ಸಾಧ್ಯತೆ ಇದ್ದು, ನಾವು ಅಪರಾಧ ಮಾಡಲು ಸೇರುತ್ತಿಲ್ಲ. ನಾವು ರೈತರು. ಭಾರತ ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿಗೆ ತಂದ ನಂತರ ಅದಕ್ಕೆ ಪೂರಕವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತಂದಿಲ್ಲ. ಆದರೆ ಇದೀಗ ಕರ್ನಾಟಕ ಸರ್ಕಾರ ಅದನ್ನು ಜಾರಿಗೊಳಿಸಲು ಮುಂದಾಗಿದೆ. ಬೇರೆ ಬೇರೆ ಕಾಯ್ದೆಗಳನ್ನು ಬದಲಾವಣೆ ಮಾಡಿ ಜಾರಿಗೊಳಿಸುವ ಕೆಲಸ ಮಾಡಿದೆ. ಈಗಾಗಲೇ ಕೆಟ್ಟ ಪರಿಣಾಮ ಕೃಷಿ ಕ್ಷೇತ್ರದ ಮೇಲಾಗಿದೆ. 80% ಎಪಿಎಂಸಿ ಬಂದ್ ಆಗ್ತಿವೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಕ್ಕೆ ತಮ್ಮ ಪ್ರತಿಭಟನಾ ರ್‍ಯಾಲಿ ಮೂಲಕ ಎಚ್ಚರಿಕೆ ನೀಡುತ್ತೇವೆ. ರೈತರ ಪಕ್ಷ, ರೈತ ನಾಯಕ ಅಂತ ಬಾಯಿ ಮಾತಿಗೆ ಹೇಳೋದ್ ಅಲ್ಲ. ಈ ಕಾಯ್ದೆಗಳನ್ನು ಬಂದ್ ಮಾಡಿ ನೀವು ರೈತ ನಾಯಕರು ಅಂತ ಸಾಬೀತು ಮಾಡ್ಕೊಳ್ಳಿ ಎಂದಿದ್ದಾರೆ. ಈಗಾಗಲೇ ಮೆಜೆಸ್ಟಿಕ್  ರೈಲ್ವೆ ಸ್ಟೇಷನ್ ಬಳಿಗೆ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ  ರೈತರು ಆಗಮಿಸಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ರೈತರು ಆಗಮಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

Comments

Leave a Reply

Your email address will not be published. Required fields are marked *