ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ

ಮಂಡ್ಯ: ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕೆಂದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ (Karnataka) ರಾಜ್ಯ ರೈತ ಸಂಘ ಕಳೆದ 10 ದಿನಗಳಿಂದ ಮಂಡ್ಯದಲ್ಲಿ (Mandya) ಅಹೋರಾತ್ರಿ ಧರಣಿ ನಡೆಸುತ್ತಿದೆ. ಆದರೆ ಸರ್ಕಾರ (Government) ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪಾಲಿಗೆ (Farmers) ಸತ್ತು ಹೋಗಿವೆ ಎಂದು ಅಣುಕು ಶವಯಾತ್ರೆ ನಡೆಸಿ ಡಿಸಿ ಕಚೇರಿ ಮುತ್ತಿಗೆ ಹಾಕಿ ಇಂದು ರೈತರು ಪ್ರತಿಭಟನೆ ನಡೆಸಿದ್ದಾರೆ.

ಕಳೆದ 10 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗಧಿ, ಹಾಲಿನ ದರ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಅಹೋರಾತ್ರಿ ಧರಣಿ ನಡೆಸಿರುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್‍ನ (JDS) ನಾಯಕರು ಪ್ರತಿಭಟನೆ ಬಂದು ಭೇಟಿ ನೀಡಿ ಬೆಂಬಲ ಸೂಚಿಸಿದ್ರು. ಇಷ್ಟಾದ್ರು ಸಹ ಸರ್ಕಾರದ ಯಾವೊಬ್ಬ ಮಂತ್ರಿಯೂ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಇನ್ಮುಂದೆ ವಿದ್ಯುತ್‌ ಬಿಲ್ ಕಟ್ಟದೇ ಇದ್ದರೆ ಸಂಪರ್ಕವೇ ಕಡಿತ

ಹೀಗಾಗಿ ಇಂದು ಸಿಟ್ಟಿಗೆದ್ದ ರೈತರು ಮಂಡ್ಯದ ಸಂಜಯ್ ವೃತ್ತದಿಂದ ಕಬ್ಬಿನ ಟ್ರ್ಯಾಕ್ಟರ್‌ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಈ ವೇಳೆ ರೈತರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತ್ತಿವೆ ಎಂದು ಅಣುಕು ಶವ ಯಾತ್ರೆ ಮಾಡಿದ್ರು. ರೈತರೊಂದಿಗೆ ಪೊಲೀಸರು ಶವಯಾತ್ರೆ ನಿಲ್ಲಿಸುವಂತೆ ವಾಗ್ವಾದ ನಡೆಸಿದ್ರು. ವಾಗ್ವಾದ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲೇ ಅಣಕು ಶವಕ್ಕೆ ಬೆಂಕಿ ಹಾಕಿ ರೈತರು ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಧಿಕಾರಿಯತ್ತ ಪ್ರತಿಭಟನಾ ಮೆರಣಿಗೆ ಮೂಲಕ ಬಂದ ರೈತರು, ಡಿಸಿ ಕಚೇರಿ ಬಳಿ ಹಾಕಿದ್ದ ಬ್ಯಾರಿಕೇಡ್‌ನ್ನು ತಳ್ಳಿ ಡಿಸಿ ಕಚೇರಿ ಮುತ್ತಿಗೆಗೆ ಯತ್ನಿಸಿದ್ರು. ಡಿಸಿ ಕಚೇರಿ ಆವರಣದಲ್ಲಿ ರೈತರು ಆಕ್ರೋಶ ಪಡುತ್ತಿದ್ದಂತೆ ಪೊಲೀಸರು ಡಿಸಿ ಕಚೇರಿಯ ಸುತ್ತ ಸುತ್ತುವರಿದ ಕಾರಣ ರೈತರು ಡಿಸಿ ಆವರಣದಲ್ಲಿ ಕೂತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *