ರೈತರ ಆಸ್ತಿ ಒಂದಿಂಚೂ ಪಡೆದಿಲ್ಲ – ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡ್ರೆ ಏನು ತಪ್ಪು? – ಜಮೀರ್ ಪ್ರಶ್ನೆ

– ರೈತರ ಜಮೀನಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ಗೆ ಸಚಿವರ ಸಮರ್ಥನೆ

ವಿಜಯಪುರ: ಇಲ್ಲಿನ ರೈತರ ಜಮೀನಿಗೆ ವಕ್ಫ್ ಬೋರ್ಡ್‌ನಿಂದ (Waqf Board) ನೀಡರುವ ನೊಟೀಸ್‌ನ್ನು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಸಮರ್ಥನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ರೈತರ ಒಂದಿಂಚು ಜಮೀನು ನಾವು ಪಡೆದಿಲ್ಲ. ವಿಜಯಪುರದಲ್ಲಿ (Vijayapura) ನಾವು ವಕ್ಫ್ ಅದಾಲತ್ ಮಾಡುತ್ತಿದ್ದೇವು. ಆ ಸಭೆಗೆ ಶಾಸಕ ಯತ್ನಾಳ್ (Basanagouda Patil Yatnal) ಅವರನ್ನು ಕರೆದಿದ್ದೇವು. ಆದರೆ ಅವರು ಆ ಸಭೆಗೆ ಬರಲಿಲ್ಲ. ಈಗ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್‌ – 1ನೇ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ರೈಗೆ 7 ವರ್ಷ ಜೈಲು

ರೈತರ ಒಂದು ಇಂಚು ಆಸ್ತಿ ಪಡೆದಿಲ್ಲ. ರೈತರ ಆಸ್ತಿ ಆಗಿದ್ರೆ ಅದನ್ನ ವಾಪಸ್ ಕೊಡ್ತೀವಿ. ಸುಮ್ಮನೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ದಾಖಲಾತಿ ಮಾಡ್ತಿದ್ದೇವೆ. ಅದರಲ್ಲಿ ರೈತರ ಜಾಗ ಯಾವುದೂ ಇಲ್ಲ. ಇವರು ಸುಮ್ಮನೆ ಕ್ರಿಯೇಟ್ ಮಾಡಿಕೊಂಡಿದ್ದಾರೆ. ರೈತರ ಆಸ್ತಿ ಯಾರು ಮುಟ್ಟೋಕೆ ಆಗುವುದಿಲ್ಲ ಎಂದು ನೊಟೀಸ್ ಸಮರ್ಥನೆ ಮಾಡಿಕೊಂಡರು.

ಯತ್ನಾಳ್ ಮೀಟಿಂಗ್‌ಗೆ ಬರಲಿಲ್ಲ. 3 ದಿನ ಆದ ಮೇಲೆ ಆರೋಪ ಮಾಡ್ತಿದ್ದಾರೆ. ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡರೆ ಏನು ತಪ್ಪು? ನಾವು ರೈತರ ಆಸ್ತಿ ಒಂದಿಂಚು ಪಡೆದಿಲ್ಲ. ವಕ್ಫ್ ಆಸ್ತಿ ಖಾತಾ ಮಾಡ್ತಿದ್ದೇವೆ. ರೈತರ ಆಸ್ತಿ ನಾವು ಮುಟ್ಟಲ್ಲ. ಬೇರೆಯವರ ಜಾಗ ನಾವು ಹೇಗೆ ಪಡೆಯೋಕೆ ಆಗುತ್ತದೆ? ಯತ್ನಾಳ್ ಸಭೆಗೆ ಬಂದು ವಿರೋಧ ಮಾಡಬೇಕಿತ್ತು. ಯಾಕೆ ವಿರೋಧ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ವಿಜಯಪುರ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್:
ವಿಜಯಪುರ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಎಂ ಬಿ ಪಾಟೀಲ (MB Patil) ಮತಕ್ಷೇತ್ರದ ಹೊನವಾಡ ಗ್ರಾಮದ ರೈತರ ಜಮೀನು ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿತ್ತು. ಇದ್ರಿಂದ ರೈತರು ಆತಂಕಗೊಂಡಿದ್ದಾರೆ. ಆದ್ರೆ, ಡಿಸಿ ಮಾತ್ರ, ಹೆದರಬೇಡಿ.. ನಿಮ್ಮಲ್ಲಿರುವ ಸೂಕ್ತ ದಾಖಲೆ ನೀಡಿ ಎಂದಿದ್ದರು. ಇದ್ರಿಂದ ತೃಪ್ತಗೊಳ್ಳದ ರೈತರು ವಕ್ಫ್ ಕಾಯ್ದೆ ಕುರಿತ ಸಂಸದೀಯ ಜಂಟಿ ಸದನ ಸಮಿತಿ ಸದಸ್ಯರು ಆಗಿರುವ ಸಂಸದ ತೇಜಸ್ವೀ ಸೂರ್ಯರನ್ನು ಭೇಟಿ ಮಾಡಿದ್ದರು. ನ್ಯಾಯ ಒದಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದರು.

ಈ ವೇಳೆ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ತರಾತುರಿಯಲ್ಲಿ ನೀಡಲಾಗಿರುವ ವಕ್ಫ್ ಬೋರ್ಡ್ ನೋಟೀಸ್‌ನಿಂದ ರಾಜ್ಯದ ಸಾವಿರಾರು ರೈತರು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಶೀಘ್ರವೇ ಅವರ ಆತಂಕ ದೂರ ಮಾಡಿ, ನ್ಯಾಯ ನೀಡುವ ಕೆಲಸ ಮಾಡಲಾಗುವುದು ಅಂದ್ರು. ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಅಧಿಕ ಎಕರೆ ಕೆರೆ ಜಾಗವನ್ನು ವಕ್ಫ್, ತನ್ನ ಆಸ್ತಿ ಎಂದು ನೋಟೀಸ್ ಜಾರಿ ನೀಡಿದೆ ಎಂದು ತೇಜಸ್ವಿ ಸೂರ್ಯ ಆಪಾದಿಸಿದ್ದರು. ವಕ್ಫ್ ತಿದ್ದುಪಡಿ ಬಿಲ್ ಜಾರಿಗೆ ಮುನ್ನ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೋಂದಣಿ ಮಾಡಿಕೊಡುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡ್ತಿರೋದು ಅಕ್ಷಮ್ಯ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದ್ದರು.ಇದನ್ನೂ ಓದಿ: ಶಿಗ್ಗಾಂವಿ ಕಾಂಗ್ರೆಸ್‌ ಬಂಡಾಯ ಶಮನ – ಅಜ್ಜಂಪೀರ್‌ ಮನವೊಲಿಸುವಲ್ಲಿ ಸಿಎಂ ಯಶಸ್ವಿ