ಪ್ರಧಾನಿ ಮೋದಿ ಹೆಸರಲ್ಲಿ ಬಡ ರೈತರಿಗೆ ಮೋಸ!

– ಮಾರ್ಯಾದೆಗೆ ಅಂಜಿ ದೂರು ನೀಡಲು ನಿರಾಕರಣೆ

ಹಾಸನ: ಪ್ರಧಾನಿ ಮೋದಿಯವರ ಯೋಜನೆ ಇದು ಇದರಿಂದ ನಿಮಗೆ ಹಣ ಹಾಕುತ್ತೇವೆ ಎಂದು ರೈತರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ರಾಜ್ಯದಲ್ಲಿ ಕೇಳಿ ಬರುತ್ತಿವೆ.

ಹೌದು. ಹಣ ಹಾಕುವ ಆಮಿಷ ಒಡ್ಡಿ ಖದೀಮರ ಗ್ಯಾಂಗ್ ಒಂದು ಪ್ರಧಾನಿ ಮೋದಿ ಹೆಸರಲ್ಲೇ ಮುಗ್ಧರ ಖಾತೆಗೆ ಖನ್ನ ಹಾಕಿದೆ. ಈ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ಗವಿ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊದಲು ಮೊಬೈಲ್‍ಗೆ ಕರೆ ಮಾಡುವ ಖದೀಮರು ನಾವು ಮೋದಿ ಕೇರ್ ನಿಂದ ಕರೆ ಮಾಡಿದ್ದೇವೆ. ಮೋದಿಯವರು ನಿಮ್ಮ ಖಾತೆಗೆ ಹಣ ಜಮಾವಣೆ ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ನಿಮ್ಮ ಖಾತೆಯಲ್ಲಿ ಎರಡು ಸಾವಿರ ಠೇವಣಿ ಇರಬೇಕು ಅಂತ ಒಬ್ಬರನ್ನು ನಂಬಿಸಿದ್ದಾರೆ. ನಂತರ ಆ ಖಾತೆಗೆ ತೋರಿಕೆಗೆ ತಂಡ ಎರಡು ಸಾವಿರ ಜಮೆ ಮಾಡಿದೆ.

ಖದೀಮರು ರೈತರಿಗೆ ನಂಬಿಕೆ ಹುಟ್ಟಿಸಿ ನಂತರ ಗ್ರಾಮದ ಇನ್ನಷ್ಟು ಮಂದಿ ಬ್ಯಾಂಕ್ ಖಾತೆ ಮಾಹಿತಿ ಪಡೆದು ಅವರ ಎಲ್ಲಾ ಖಾತೆಗೆ ಕನ್ನ ಇಟ್ಡಿದ್ದಾರೆ. ಇದೇ ರೀತಿ ಒಂದರಿಂದ ಹದಿನಾರು ಸಾವಿರದ ವರೆಗೂ ಈ ಮುಗ್ಧ ರೈತರು ಕಷ್ಟಪಟ್ಟು ದುಡಿದ ತಮ್ಮ ಹಣ ಕಳೆದುಕೊಂಡಿದ್ದಾರೆ. ಈ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಈ ರೀತಿ ಮೋಸ ಹೋಗಿದ್ದಾರೆ. ಇಷ್ಟೆಲ್ಲಾ ಆದರೂ ಈ ಗ್ರಾಮದವರು ಮರ್ಯಾದೆಗೆ ಅಂಜಿ ಇನ್ನು ಪೆÇಲೀಸ್ ಠಾಣೆಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *