ಗಾಂಜಾ ಬೆಳೆಯ ಮೊರೆ ಹೋದ ಹನೂರು ಕ್ಷೇತ್ರದ ರೈತರು!

ಚಾಮರಾಜನಗರ: ಸರ್ಕಾರ ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಚಾಮರಾಜನಗರದ ಹನೂರು ಕ್ಷೇತ್ರದ ಕೆಲ ರೈತರು ಗಾಂಜಾ ಬೆಳೆ ಮೊರೆ ಹೋಗಿದ್ದಾರೆ.

ಈ ಕ್ಷೇತ್ರ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಸರಿಯಾದ ನೀರಾವರಿ ಇಲ್ಲ. ಒಂದು ವೇಳೆ ರೈತರು ಕಷ್ಟಪಟ್ಟು ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಈ ಕ್ಷೇತ್ರದ ರೈತರು ದಾರಿ ಕಾಣದ ಗಾಂಜಾ ಬೆಳೆದು ಹಣ ಸಂಪಾದನೆಗೆ ಮುಂದಾಗಿದ್ದಾರೆ.

ಇಲ್ಲಿ ಬೆಳೆದ ಗಾಂಜಾ ಬೆಳೆಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆಯಿದ್ದು, ಈ ಭಾಗದ ಗಾಂಜಾ ಸೊಪ್ಪಿಗೆ ದೊಡ್ಡ ಬೆಟ್ಟದ ಸೊಪ್ಪು ಎಂಬ ಕೋಡ್ ವರ್ಡ್ ಕೂಡ ಇದೆ. ಅರಿಶಿಣ, ಟೊಮೊಟೊ, ಜೋಳ ಸೇರಿದಂತೆ ಇನ್ನಿತರ ಬೆಳೆಗಳ ಮಧ್ಯ ಗಾಂಜಾ ಬೆಳೆಯಲಾಗುತ್ತಿದೆ. 2 ತಿಂಗಳ ಅವಧಿಯಲ್ಲೇ ಹನೂರು ಭಾಗದಲ್ಲಿ 42 ಗಾಂಜಾ ಬೆಳೆ ಪ್ರಕರಣಗಳು ಬೆಳಕಿಗೆ ಬಂದಿವೆ. ಕ್ಷೇತ್ರ ಅಭಿವೃದ್ಧಿಯಾಗದೇ ಇರೋದು ಇದಕ್ಕೆ ಮೊದಲ ಕಾರಣವಾದ್ರೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರೋದು 2ನೇ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *