ಬಂಡೀಪುರಕ್ಕೆ ಆಗಮಿಸಿದ್ದ ಮೋದಿಗಾಗಿ ಹೆಲಿಪ್ಯಾಡ್- ಭೂಮಿ ಕೊಟ್ಟ ರೈತನಿಗೆ ಸಿಗದ ಪರಿಹಾರ

ಚಾಮರಾಜನಗರ: ಬಂಡೀಪುರಕ್ಕೆ 50ರ ಸಂಭ್ರಮ ಹಿನ್ನೆಲೆ ಪ್ರಧಾನಿ ಮೋದಿ (Narendra Modi) ಬಂಡೀಪುರಕ್ಕೆ (Bandipura) ಆಗಮಿಸಿ ಸಫಾರಿ ನಡೆಸಿದ್ದರು. ಪ್ರಧಾನಿ ಮೋದಿಯ ಚಾಪರ್ ಲ್ಯಾಂಡಿಂಗ್ ಗಾಗಿ ಮಾಡಿದ್ದ ಹೆಲಿಪ್ಯಾಡ್ ಈಗ ಸಿಕ್ಕಾಪಟ್ಟೆ ಕಾಂಟ್ರವರ್ಸಿಗೆ ಒಳಗಾಗಿದೆ.

ಹೌದು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಮೋದಿ ಚಾಪರ್ ಲ್ಯಾಂಡಿಂಗ್ ಗಾಗಿ ಅವಕಾಶ ಮಾಡಿ ಕೊಟ್ಟ ರೈತ ಇದೀಗ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮೋದಿಗೆ ಪತ್ರ ಬರೆಯುವ ನಿರ್ಧಾರ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

ಕಳೆದ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡಿಪುರಕ್ಕೆ ಆಗಮಿಸಿ ಸಫಾರಿ ಮಾಡಿದ್ರು, ಮೋದಿ ಆಗಮನ ಹಿನ್ನೆಲೆ ಶಿವಣ್ಣ ಎಂಬವರ ಜಮೀನಿನನಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಪ್ರಧಾನಿ ಚಾಪರ್ ಲ್ಯಾಂಡಿಂಗ್ ಹಾಗೂ ಎಸ್.ಪಿ.ಜಿ ಭದ್ರತಾ ಪಡೆಗೆ ಎರಡು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದ ಜಿಲ್ಲಾಡಳಿತ ಬಳಿಕ ಜಮೀನನ್ನ ಮತ್ತೆ ಸರಿ ಪಡಿಸಿ ಕೊಡದೇ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಜಮೀನಿನಲ್ಲಿ ಏನನ್ನು ಬೆಳೆಯಲಾಗದೆ ರೈತ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಮತ್ತೊಂದೆಡೆ ಮೋದಿ ಲ್ಯಾಂಡ್ ಆದ ಸ್ಥಳವೆಂದು ನೋಡಲು ಬರುವ ಕೆಲ ಯುವಕರು ಮದ್ಯ ಸೇವಿಸಿ ಬಾಟ್ಲಿಗಳನ್ನ ಎಲ್ಲೆಂದರಲ್ಲಿ ಬಿಸಾಕ್ತಿದ್ದಾರಂತೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೈತನ ನೆರವಿಗೆ ಧಾವಿಸಬೇಕಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]