ಹೆಚ್‍ಡಿಕೆ ರಾಜೀನಾಮೆ – ಬೇಸರಗೊಂಡು 1 ಎಕ್ರೆ ಸಿಲ್ವರ್ ಗಿಡ ಕಡಿದ ರೈತ

ಮಂಡ್ಯ: ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆ ತಮ್ಮ ಒಂದು ಎಕ್ರೆಯಲ್ಲಿ ಬೆಳೆದಿದ್ದ ಸಿಲ್ವರ್ ಗಿಡಗಳನ್ನು ರೈತ ಕಡಿದು ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ರೈತನ ವಿಡಿಯೋವನ್ನು ಶೇರ್ ಮಾಡಲಾಗಿದೆ. ಇದು 18 ಸೆಕೆಂಡ್ ವಿಡಿಯೋವಾಗಿದ್ದು, ಇದರಲ್ಲಿ ರೈತರೊಬ್ಬರು ಜಮೀನೊಂದರಲ್ಲಿ ಕೈಯಲ್ಲಿ ಮಚ್ಚು ಹಿಡಿದು ನಿಂತಿರುವುದು ಹಾಗೂ ಆತನ ಸುತ್ತಲು ಕಡಿದು ಹಾಕಿರುವ ಸಿಲ್ವರ್ ಗಿಡಗಳ ದೃಶ್ಯಗಳು ಸೆರೆಯಾಗಿದೆ. ತಮ್ಮ ಜಮೀನಿನಲ್ಲಿ ಬೆಳೆಸಿದ್ದ ಸಿಲ್ವರ್ ಗಿಡಗಳನ್ನು ಕಡಿದು ಹಾಕಲು ವಿಡಿಯೋದಲ್ಲೇ ರೈತ ಕಾರಣವನ್ನೂ ಕೂಡ ತಿಳಿಸಿದ್ದಾರೆ.

ಕುಮಾರಸ್ವಾಮಿ ರಾಜೀನಾಮೆ ನೀಡಿದರೆ ಬೆಳಗ್ಗೆ ಒಳಗಡೆ ಒಂದು ಎಕ್ರೆ ಬೆಳೆದಿರುವ ಸಿಲ್ವರ್ ಗಿಡ ಕಡಿದು ಹಾಕುವುದಾಗಿ ಚಾಲೆಂಜ್ ಮಾಡಿದ್ದೆ. ಅಂತಹವರನ್ನೇ ಅಧಿಕಾರದಿಂದ ಇಳಿಸಿದಾಗ ದೇಶದಲ್ಲಿ ಇನ್ಯಾರು ಆಡಳಿತ ನಡೆಸುತ್ತಾರೆ? ಈಗ ನಾನು ಚಾಲೆಂಜ್ ಮಾಡಿರುವಂತೆ ಸಿಲ್ವರ್ ಗಿಡಗಳನ್ನು ಕಡಿದು ಹಾಕಿದ್ದೇನೆ ಎಂದು ರೈತ ಹೆಚ್‍ಡಿಕೆ ರಾಜೀನಾಮೆ ವಿಚಾರಕ್ಕೆ ಬೇಸರ ಹೊರಹಾಕಿದ್ದಾರೆ.

ಸಿಲ್ವರ್ ಗಿಡಗಳನ್ನು ಕಡಿದು ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಅಭಿಮಾನಿಗಳಿಂದ ತೀವ್ರ ಬೇಸರ ತಂದಿದೆ. ನಿಮ್ಮ ಈ ರೀತಿಯ ನಡೆಯಿಂದ ಕುಮಾರಸ್ವಾಮಿಯವರಿಗೆ ಮತ್ತಷ್ಟು ನೋವು ಕೊಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

https://www.facebook.com/217109438769435/videos/479014639540529/

Comments

Leave a Reply

Your email address will not be published. Required fields are marked *