ಬ್ಯಾರಿಕೇಡ್ ಮುರಿದು ನುಗ್ಗಿದ ಅಭಿಮಾನಿಗಳು: ಭೇಟಿ ನಿಲ್ಲಿಸಿ ಕ್ಷಮೆ ಕೇಳಿದ ಕಿಚ್ಚ

ಕಿಚ್ಚ ಸುದೀಪ್ (Kiccha Sudeep) ನಿನ್ನೆಯಿಂದಲೇ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು (birthday) ಆಚರಿಸಿಕೊಳ್ಳುತ್ತಿದ್ದಾರೆ. ಇಡೀ ರಾತ್ರಿ ಮತ್ತು ಇಂದು ಬೆಳಗ್ಗೆಯಿಂದ ನೆಚ್ಚಿನ ಅಭಿಮಾನಿಗಳ (fans) ಜೊತೆಯೇ ಇದ್ದು, ಅವರೊಂದಿಗೆ ಸಂಭ್ರಮಿಸಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಆದ ಘಟನೆಯಿಂದಾಗಿ ಅಭಿಮಾನಿಗಳ ಭೇಟಿ ನಿಲ್ಲಿಸಿದ್ದಾರೆ ಸುದೀಪ್.

ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಸುದೀಪ್ ನಿದ್ದೆ ಬಿಟ್ಟು, ಅವರೊಂದಿಗೆ ಬೆರೆತಿದ್ದರು. ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಇಂದು ಸುದೀಪ್ ಮನೆ ಮುಂದೆ ಯಾರೂ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರೂ ಅಭಿಮಾನಿಗಳು ಬಿಡಲಿಲ್ಲ. ಹಾಗಾಗಿ ಎಲ್ಲರ ಭೇಟಿಗಾಗಿ ಅವರ ಮನೆಮುಂದೆ ಬ್ಯಾರಿಕೇಡ್ ಹಾಕಿ ಭೇಟಿಯ ವ್ಯವಸ್ಥೆ ಮಾಡಲಾಗಿತ್ತು.

ನೆಚ್ಚಿನ ನಟನಿಗೆ ಕೈ ಕುಲುಕಿ ಶುಭ ಹಾರೈಸುವುದಕ್ಕಾಗಿ ಮತ್ತೆ ಸಾವಿರಾರು ಜನರು ಮನೆ ಮುಂದೆ ಜಮಾಯಿಸಿದ್ದರು. ಮೊದ ಮೊದಲು ವ್ಯವಸ್ಥಿತವಾಗಿಯೇ ಭೇಟಿ ಸಾಧ್ಯವಾಯಿತು. ಸೆಕ್ಯೂರಿಟಿ ಕೂಡ ಚೆನ್ನಾಗಿತ್ತು. ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗುತ್ತಾ ನೂಕುನುಗ್ಗಲು ಉಂಟಾಯಿತು. ಸೆಕ್ಯೂರಿಟಿಗೆ ಎಂದೇ ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಹಾಕಿ ಅಭಿಮಾನಿಗಳು ಸುದೀಪ್ ಅವರತ್ತ ನುಗ್ಗಿದರು. ಸೆಕ್ಯೂರಿಟಿ ಅಸಾಧ್ಯವಾಯಿತು. ಹಾಗಾಗಿ ಭೇಟಿ ನಿಲ್ಲಿಸಿ ಮನೆಯೊಳಗೆ ಹೊರಟು ಬಿಟ್ಟರು.

 

ಅಭಿಮಾನಿಗಳಿಗೆ ಅದರಿಂದ ನಿರಾಸೆಯಾಗಿದೆ ಎಂದು ಅರಿತ ಸುದೀಪ್, ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ‘ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಎಲ್ಲಾ ಬ್ಯಾರಿಕೇಡ್ ಗಳು ಮುರಿದು ಹೋಗಿದ್ದರಿಂದ ಮತ್ತು ಜನರು ವಿಶೇಷವಾಗಿ ಎಲ್ಲಾ ಮಕ್ಕಳು ಉಸಿರುಗಟ್ಟಲು ಪ್ರಾರಂಭಿಸಿದ್ದರಿಂದ ಅದರ ಭದ್ರತೆಯಿಂದ ಹಿಂತೆಗೆದುಕೊಳ್ಳಲಾಯಿತು. ಉತ್ತಮ ವ್ಯವಸ್ಥೆಗಳೊಂದಿಗೆ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ’ ಎಂದು ಬರೆದಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]