‘ಬಿಗ್ ಬಾಸ್’ ಕನ್ನಡ 11ರಲ್ಲಿ ತುಕಾಲಿ ಪತ್ನಿ- ಅಭಿಮಾನಿಗಳ ಆಗ್ರಹ

‘ಬಿಗ್ ಬಾಸ್’ ಕನ್ನಡ 10ರ ಆಟಕ್ಕೆ ತೆರೆಬಿದ್ದಿದೆ. ಈ ಶೋ ಮುಗಿಯುತ್ತಿದ್ದಂತೆ ಸೀಸನ್ 11ರ ಬಗ್ಗೆ ಅಭಿಮಾನಿಗಳು ಯೋಚನೆ ಮಾಡುತ್ತಿದ್ದಾರೆ. ಬಿಗ್ ಬಾಸ್ ಮುಂದಿನ ಸೀಸನ್‌ನಲ್ಲಿ ತುಕಾಲಿ ಸಂತೋಷ್ (Tukali Santhosh) ಅವರ ಪತ್ನಿ ಮಾನಸ (Manasa) ಇರಲೇಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಈ ಬಾರಿ ‘ಬಿಗ್ ಬಾಸ್’ ಕನ್ನಡ 10 ಭರ್ಜರಿಯಾಗಿ ಸೌಂಡ್ ಮಾಡಿದೆ. ಅದರಲ್ಲಿ ತುಕಾಲಿ ಸಂತೋಷ್ ಅವರ ಕಾಮಿಡಿ ಅಭಿಮಾನಿಗಳ ಗಮನ ಸೆಳೆದಿದೆ. 112 ದಿನಗಳ ತುಕಾಲಿ ಸಂತು ತಮ್ಮ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಅದರಂತೆ ಅವರ ಪತ್ನಿ ಮಾನಸ ಕೂಡ ಕಾಮಿಡಿ ಮಾಡುವ ರೀತಿಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಬಿಗ್‌ ಬಾಸ್‌’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು

ಬಿಗ್ ಬಾಸ್ ಶೋನ ಕೊನೆಯ ವಾರದಲ್ಲಿ ಫ್ಯಾಮಿಲಿ ರೌಂಡ್‌ ಮಾಡಲಾಯ್ತು. ಆಗ ತುಕಾಲಿ ಸಂತು ಪತ್ನಿ ಮಾನಸ ಅವರ ಎಂಟ್ರಿಯಾಗಿತ್ತು. ಈ ವೇಳೆ ತುಕಾಲಿಗೆ ಪತ್ನಿ ಮಾನಸ ಬೆತ್ತದ ರುಚಿ ತೋರಿಸಿದ್ದು, ಅವರ ಕಾಮಿಡಿ ಸೆನ್ಸ್‌ಗೆ ಮನೆಯಲ್ಲಿರುವ ಸ್ಪರ್ಧಿಗಳಿಗೂ ಖುಷಿ ನೀಡಿತ್ತು.

ಹಾಗಾಗಿಯೇ ಮುಂಬರುವ ‘ಬಿಗ್ ಬಾಸ್’ ಕನ್ನಡ 11ರಲ್ಲಿ ತುಕಾಲಿ ಪತ್ನಿ ಮಾನಸ ಇರಲೇಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಮಾನಸ ಇದ್ದರೆ ನಗುವಿಗೆ ಕೊರತೆ ಇರೋದಿಲ್ಲ ಎಂದು ಈಗಿಂದಲೇ ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಬರ್ತ್‌ಡೇಗೆ ತೃಪ್ತಿ ದಿಮ್ರಿ ಸ್ವೀಟ್ ವಿಶ್

ಪ್ರೇಕ್ಷಕರ ಆಗ್ರಹಕ್ಕೆ ಮಣಿದು ‘ಬಿಗ್ ಬಾಸ್’ ತಂಡ ಮುಂದಿನ ಸೀಸನ್‌ನಲ್ಲಿ ಮಾನಸರನ್ನು ಸ್ಪರ್ಧಿಯಾಗಿ ತೆಗೆದುಕೊಳ್ತಾರಾ? ಎಂಬುದನ್ನು ಕಾಯಬೇಕಿದೆ.