ವಾರ ಕಳೆದ್ರೂ ಅಪ್ಪು ಸ್ಮಾರಕಕ್ಕೆ ಜನಸಾಗರ- ಮಳೆ ಲೆಕ್ಕಿಸದೇ ದರ್ಶನ ಪಡೆದ ಅಭಿಮಾನಿಗಳು

ಬೆಂಗಳೂರು: ಅಪ್ಪು ನಮ್ಮಗಲಿ ಇಂದಿಗೆ ಎಂಟು ದಿನ. ಇಂದು ಕೂಡ ಪುನೀತ್ ಸಮಾಧಿ ದರ್ಶನ ಮಾಡಲು ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಧಾವಿಸಿದ್ರು. ಮಳೆಯನ್ನು ಲೆಕ್ಕಿಸದೇ ಮಕ್ಕಳು, ಮಹಿಳೆಯರು, ದೊಡ್ಡವರು ಎನ್ನದೇ ಸರತಿ ಸಾಲಲ್ಲಿ ನಿಂತು ಅಪ್ಪು ಸಮಾಧಿ ದರ್ಶಿಸಿ ಕಣ್ಣೀರಾದರು. ಇದನ್ನೂ ಓದಿ: ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಅಶೋಕ್, ನಟ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿದ್ರು. ತೆಲುಗು ಮತ್ತು ತಮಿಳು ನಟರು ಕೂಡ ಅಪ್ಪು ಸಮಾಧಿಗೆ ನಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಜೈಭೀಮ್ ಖ್ಯಾತಿಯ ನಟ ಸೂರ್ಯ, ಹಿರಿಯ ನಟ ರಾಜೇಂದ್ರ ಪ್ರಸಾದ್ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದ್ರು. ಈ ವೇಳೆ ನಟ ಸೂರ್ಯ ಗಳಗಳನೇ ಅತ್ತರು. ಅಪ್ಪು ಜೊತೆಗೆ ಸಾಂಗತ್ಯವನ್ನು ನೆನಪಿಸಿಕೊಂಡು ಭಾವುಕರಾದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

ಈ ಮಧ್ಯೆ ಇಂದು ಕೂಡ ಇಬ್ಬರು ಅಪ್ಪು ಅಭಿಮಾನಿಗಳು ಸಾವಿನ ಮನೆ ಸೇರಿದ್ದಾರೆ. ಚಾಮರಾಜನಗರ ಮತ್ತು ತುಮಕೂರಿನ ಒಬ್ಬರು ಅಪ್ಪು ಅಗಲಿಕೆಯ ಆಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಈವರೆಗೂ ಸಾವನ್ನಪ್ಪಿದ ಅಪ್ಪು ಅಭಿಮಾನಿಗಳ ಸಂಖ್ಯೆ 15 ದಾಟಿದೆ. ಅಪ್ಪು ಮೇಲಿನ ಅಭಿಮಾನಕ್ಕೆ, ಪ್ರೀತಿಗೆ ಗಡಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗ್ತಿದೆ. ದಾವಣಗೆರೆಯಲ್ಲೊಬ್ಬರು ಹಿರಿಯರ ಪೂಜೆ ಮಾಡುವಾಗ ಅಪ್ಪು ಫೋಟೋಗೂ ಜಾಗ ನೀಡಿ ಅಭಿಮಾನ ಮೆರೆದಿದ್ದಾರೆ. ತಮಿಳುನಾಡಿನ ವೇಲೂರಿನ ಜಲಕಂಠೇಶ್ವರ ದೇಗುಲದಲ್ಲಿ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಸ್ವರ್ಗದಲ್ಲಿ ಅಪ್ಪ, ಅಮ್ಮನೊಂದಿಗೆ ಪುನೀತ್ – ಫೋಟೋ ವೈರಲ್

Comments

Leave a Reply

Your email address will not be published. Required fields are marked *