`ಯುವ’ ಸಿನಿಮಾದ ಟೀಸರ್ ನೋಡಿ ಸಂಭ್ರಮಿಸಿದ ಫ್ಯಾನ್ಸ್

ರ್ನಾಟಕವೇ ಎದುರು ನೋಡ್ತಿದ್ದ ಘಳಿಗೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾದ ಟೀಸರ್ ಜೊತೆ ಪವರ್‌ಫುಲ್ ಟೈಟಲ್ ಕೂಡ ಅನಾವರಣವಾಗಿದೆ. ʻಯುವʼ ನಾಗಿ (Yuva) ಯುವರಾಜ್‌ಕುಮಾರ್‌ (YuvaRajkumar) ಅಖಾಡಕ್ಕೆ ಇಳಿದಿದ್ದಾರೆ. ಚಿತ್ರದ ಟೀಸರ್‌ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Breaking:ಸ್ಯಾಂಡಲ್‌ವುಡ್‌ನಲ್ಲಿ ಯುವ ಪರ್ವ ಆರಂಭ

ಡಾ.ರಾಜ್ ಕುಟುಂಬದ ಕುಡಿ ಯುವರಾಜ್ ಕುಮಾರ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಖ್ಯಾತ ನಿರ್ದೇಶಕ ಸಂತೋಷ್ ರಾಮ್ ಜೊತೆ ಯುವ ಕೈಜೋಡಿಸಿದ್ದಾರೆ. ಅಪ್ಪು ಅಭಿಮಾನಿಗಳ ಕನಸಿಗೆ ಹೊಂಬಾಳೆ ಸಂಸ್ಥೆ (Hombale Films) ಕೂಡ ಸಾಥ್ ನೀಡಿದೆ. ಇದೀಗ ಯುವ ನಟನೆಯ ಮೊದಲ ಸಿನಿಮಾ ಮುಹೂರ್ತ ನೆರವೇರಿದೆ. ಟೀಸರ್ ಜೊತೆ ಟೈಟಲ್ ಕೂಡ ರಿವೀಲ್ ಆಗಿದೆ. ಈ ಕಾರ್ಯಕ್ರಮಕ್ಕೆ ಯುವನ ಜೊತೆ ಡಾ.ರಾಜ್ ಕುಟುಂಬದ ಸದಸ್ಯರು ಸಾಥ್ ನೀಡಿದ್ದಾರೆ. ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಬಗ್ಗೆ ಗಾಂಧಿನಗರದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. `ಜ್ವಾಲಾಮುಖಿ’ ಅಥವಾ `ಅಶ್ವಮೇಧ’ ಈ ಎರಡು ಟೈಟಲ್‌ನಲ್ಲಿ ಒಂದನ್ನ ಇಡಲಾಗುತ್ತದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಕುತೂಹಲಕ್ಕೂ ಇದೀಗ ತೆರೆ ಬಿದ್ದಿದೆ.

ಡಾ.ರಾಜ್ ಅವರ ಮೊಮ್ಮಗ `ಯುವ’ (Yuva Film) ನಟನೆಯ ಮೊದಲ ಚಿತ್ರಕ್ಕೆ ಯುವ ಎಂದೇ ಟೈಟಲ್ ಇಡಲಾಗಿದೆ. ಬೈಕ್‌ನಲ್ಲಿ ಯುವ ಕುಳಿತಿರುವ ಪೋಸ್ಟರ್ ಲುಕ್ ರಿವೀಲ್ ಆಗಿದ್ದು, ರಗಡ್ ಲುಕ್‌ನಲ್ಲಿ ಯುವ ಮಿಂಚಿದ್ದಾರೆ. ಫಸ್ಟ್ ಲುಕ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೆ ಹರಿಯುತ್ತದೆ ಎಂಬ ಖಡಕ್ ಡೈಲಾಗ್ ಹೇಳುವ ಮೂಲಕ `ಯುವ’ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಈ ವರ್ಷ ಡಿಸೆಂಬರ್ 22ಕ್ಕೆ ಯುವ ಪರ್ವ ಶುರುವಾಗಲಿದೆ.

ಇನ್ನೂ ಯುವ ರಾಜ್‌ಕುಮಾರ್ ಡೆಬ್ಯು ಸಿನಿಮಾ `ಯುವ’ ಚಿತ್ರದ ಟೀಸರ್ ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಪಟಾಕಿ ಹೊಡೆದು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಫೋಟೋವಿರುವ ಬಾವುಟ ಹಾರಿಸಿ ಅಪ್ಪುಗೆ ಜೈಕಾರ ಹಾಕುತ್ತಾ ಯುವನನ್ನ ಫ್ಯಾನ್ಸ್ ಸ್ವಾಗತಿಸಿದ್ದಾರೆ. ಟೀಸರ್‌ನಲ್ಲಿ ಯುವನ ಕೌಂಟರ್ ಡೈಲಾಗ್ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಟೀಸರ್ ನೋಡಲು ಚಿತ್ರಮಂದಿರದ ಬಳಿ ಸೇರಿರುವ ನೂರಾರು ಅಭಿಮಾನಿಗಳು ಸೇರಿದ್ದು, ಇದು ಟೀಸರ್ ಅಷ್ಟೇ ಸಿನಿಮಾ ರಿಲೀಸ್‌ಗೆ ಇತಿಹಾಸ ಕ್ರಿಯೇಟ್ ಮಾಡ್ತಿವಿ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

Comments

Leave a Reply

Your email address will not be published. Required fields are marked *