ಬಿಯರ್ ದಾನ ಮಾಡಿ ಎಂದ ಅಭಿಮಾನಿ – ಬಿಯರ್ ಜೊತೆ ಆಲೂ ಭುಜಿಯಾ ಸಾಕಾ ಎಂದ ಸೋನು

ಬಾಲಿವುಡ್, ಚಂದವನದಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಸೋನು ಸೂದ್. ಈಗ ಸಾಮಾನ್ಯ ಜನರಿಗೆ ರಿಯಲ್ ಸ್ಟಾರ್ ಆಗಿದ್ದಾರೆ. ಕೊರೊನಾ ಸಮಯದಲ್ಲಿ ಈ ನಟಿ ಬಡವರಿಗೆ ಮತ್ತು ಸಹಾಯಕ್ಕಾಗಿ ಬಂದ ಯಾರನ್ನು ಖಾಲಿ ಕೈಯಲ್ಲಿ ಕಳಿಸಿಲ್ಲ. ಅದೇ ರೀತಿ ಇಲ್ಲೊಬ್ಬ ವಿಚಿತ್ರ ಅಭಿಮಾನಿಯೊಬ್ಬ ಸರ್ ನನಗೆ ಬಿಯರ್ ದಾನ ಮಾಡಿ ಎಂದು ಕೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ.

ಸಿನಿಮಾಗಳಲ್ಲಿ ವಿನಲ್ ಪಾತ್ರ ಹೆಚ್ಚು ಮಾಡುವ ಈ ನಟ ನಿಜ ಜೀವನದಲ್ಲಿ ಸಾಮಾನ್ಯ ಜನರಿಗೆ ಹೀರೋ ಆಗಿದ್ದಾರೆ. ಸಿನಿಮಾದ ಜೊತೆಗೆ ಸೋನು ಸಾಮಾನ್ಯರಿಗೆ ಮಾಡುವ ಸೇವೆಗೆ ಹೆಚ್ಚು ಅಭಿಮಾನಿಗಳಾಗಿದ್ದಾರೆ. ಈ ವೇಳೆ ಮೀಮ್ ಒಂದರಲ್ಲಿ ಸೋನು ಅವರಿಗೆ ಅಭಿಮಾನಿಯೊಬ್ಬ ಕಾಲೆಳೆದಿದ್ದಾನೆ. ಈ ಪ್ರಸಂಗ ಫುಲ್ ವೈರಲ್ ಆಗುತ್ತಿದ್ದು, ಸೋನು ಸಹ ಕಾಮಿಡಿಯಾಗಿ ಉತ್ತರಕೊಟ್ಟಿದ್ದಾರೆ.

‘ಚಿಲ್ಡ್ ಬಿಯರ್ ದಾನ ಮಾಡಿ ಸೋನು’ ಎಂಬ ಮೀಮ್ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿದ ಸೋನು ಅಭಿಮಾನಿಯ ಬೇಡಿಕೆಯನ್ನು ಬಹಳ ನಾಜೂಕಿನಿಂದ ಉತ್ತರಿಸಿದ್ದಾರೆ. ಸೋನು, ‘ಚಿಲ್ಡ್ ಬಿಯರ್ ಜೊತೆ ಮಿಕ್ಸ್ಚರ್‌ ಬೇಕಾ’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

ಮೀಮ್‍ನಲ್ಲಿ ಏನಿದೆ?
ಮೀಮ್‍ನಲ್ಲಿ, ಚಳಿಗಾಲದಲ್ಲಿ ಕಂಬಳ ವಿತರಿಸುವ ನೀವು, ಈ ಬೇಸಿಗೆಯಲ್ಲಿ ನಮಗೆ ತಂಪಾದ ಬಿಯರ್ ದಾನ ಮಾಡುವುದಿಲ್ಲವೇ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಹಲವು ಭಾರೀ ಶೇರ್ ಸಹ ಆಗಿದೆ. ಅದಕ್ಕೆ ಸೋನು, ಬಿಯರ್ ಜೊತೆಗೆ ಸೈಡ್ಸ್‌ಗೆ ತಿನ್ನಲು ಖಾರವಾದ ಆಲೂ ಭುಜಿಯಾ ಮಿಕ್ಸ್ಚರ್‌ ಕೂಡಾ ಬೇಕಾ ಎಂದು ಕಾಮಿಡಿಯಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು, ಮಿಕ್ಸ್ಚರ್‌ ಜೊತೆಗೆ ಪಂಜಾಬಿ ತಡ್‍ಕಾ ಸ್ನಾಕ್ಸ್ ಕೂಡಾ ಬೇಕು ಎಂದಿದ್ದಾರೆ. ಅದರಲ್ಲಿಯೂ ಒಬ್ಬ ಅಭಿಮಾನಿ, ಸೋನು ನೀವು ನಿಜಕ್ಕೂ ದೇವರು ಎಂದು ರೀ-ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *