ರಕ್ತದಲ್ಲಿ ತಯಾರಾಯ್ತು ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ – ಭಾವುಕನಾಗಿ ವಿನಂತಿ ಮಾಡಿದ ನಿರ್ದೇಶಕ

ನೈಜ ಘಟನೆ ಆಧಾರಿತ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ಸು ಗಳಿಸುವುದರ ಜೊತೆಗೆ ಜನರಲ್ಲಿ ಕ್ರೇಜ್ ಸೃಷ್ಟಿಸಿದೆ. ಬಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಕೊಳ್ಳೆ ಹೊಡೆಯುತ್ತಿರುವ ಈ ಸಿನಿಮಾ ಪ್ರೇಕ್ಷಕರ ಮನವನ್ನೂ ತಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರ ತಮ್ಮ ರಕ್ತದಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪೋಸ್ಟರ್ ರಚಿಸಿದ್ದಾರೆ.

ಹೌದು, ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರ ಹೆಸರು ಹಾಗೂ ಭಾವಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುವ, ರಕ್ತದಿಂದ ಅವರಿಗೆ ಲೆಟರ್ ಬರೆಯುವುದು, ಪೇಯಿಂಟಿಂಗ್ ಮಾಡುವ ಮೂಲಕ ಹೀಗೆ ನಾನಾ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುವುದನ್ನು ಕಂಡಿದ್ದೇವೆ. ಆದರೆ ಮಹಿಳೆಯೊಬ್ಬರು ರಕ್ತದಿಂದ ‘ದಿ ಕಾಶ್ಮೀರ್ ಫೈಲ್ಸ್’ ಪೋಸ್ಟರ್ ರಚಿಸಿದ್ದು, ಇದೀಗ ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮಂಜು ಸೋನಿ ಎನ್ನುವವರು 10 ಎಂಎಲ್ ತಮ್ಮ ರಕ್ತವನ್ನು ತೆಗೆದುಕೊಂಡು ದಿ ಕಾಶ್ಮೀರ್ ಫೈಲ್ಸ್ ಪೋಸ್ಟರ್ ಚಿತ್ರ ಬಿಡಿಸಿದ್ದಾರೆ. ಇನ್ನೂ ಈ ಫೋಸ್ಟರ್ ನೋಡಿ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಫುಲ್ ಫಿದಾ ಆಗಿದ್ದು, ಆ ಮಹಿಳೆಗೆ ಸಲಹೆಯನ್ನೂ ನೀಡಿದ್ದಾರೆ. ಜೊತೆಗೆ ತಮ್ಮ ಟ್ವಿಟ್ಟರ್‍ನಲ್ಲಿ ಮಂಜು ಅವರು ರಕ್ತ ನೀಡುತ್ತಿರುವ, ಚಿತ್ರ ಬಿಡಿಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್

ಫೋಟೋಗಳ ಜೊತೆಗೆ ‘ಓಹ್ ಮೈ ಗಾಡ್. ನಂಬಲು ಸಾಧ್ಯವಾಗುತ್ತಿಲ್ಲ. ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಮಂಜೂ ಅವರಿಗೆ ನಾನು ಹೇಗೆ ಧನ್ಯವಾದ ತಿಳಿಸಬೇಕು ಅಂತ ಗೊತ್ತಿಲ್ಲ. ಅವರಿಗೆ ನನ್ನ ಶತ ಶತ ಪ್ರಣಾಮಗಳು, ಕೃತಜ್ಞತೆಗಳು. ಅವರ ಪರಿಚಯ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ’ ಎಂದು ಕ್ಯಾಪ್ಷನ್‍ನಲ್ಲಿ ಹಾಕಿಕೊಂಡಿದ್ದಾರೆ.

ಅಲ್ಲದೇ, ‘ನೀವು ಹೊಂದಿರುವ ಭಾವನೆಯನ್ನು ನಾನು ಮೆಚ್ಚುತ್ತೇನೆ. ಆದರೆ ಈ ರೀತಿಯ ಯಾವುದೇ ಪ್ರಯತ್ನಗಳನ್ನು ಮಾಡಬೇಡಿ’ ಎಂದು ವಿನಮ್ರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದೆಲ್ಲವೂ ಒಳ್ಳೆಯದಲ್ಲ. ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ’ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದು, ಇದಕ್ಕೆ ದಿ ಕಾಶ್ಮೀರ್ ಫೈಲ್ಸ್ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ಫೈಲ್ ಇದಾಗಿದೆ. ಈ ಫೈಲ್‍ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.

Comments

Leave a Reply

Your email address will not be published. Required fields are marked *