ವಿಜಯಪುರ: ನೆಚ್ಚಿನ ನಾಯಕ ನಟ ಹಾಗೂ ನಟಿಯರ ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ನೆಚ್ಚಿನ ರಾಜಕಾರಣಿಯ ಶಾಶ್ವತ ಹಚ್ಚೆ ಹಾಕಿಕೊಂಡಿದ್ದಾರೆ.
ವಿಜಯಪುರ ನಗರದ ಗ್ಯಾಂಗಬಾವಡಿ ನಿವಾಸಿ ಪಪ್ಪು ಪವಾರ ಎಂಬಾತ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯ ಭಾವಚಿತ್ರವನ್ನು ತನ್ನ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ. ಇನ್ನು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ನೀಡಬೇಕೆಂದು ಅಭಿಮಾನಿ ಪಪ್ಪುನ ಒತ್ತಾಯ.

ಅಲ್ಲದೇ ಯುವಕರಿಗೆ ಆದರ್ಶವಾಗಿರುವ ಅಪ್ಪು ಪಟ್ಟಣಶೆಟ್ಟಿ ಜನಸಾಮಾನ್ಯರೊಂದಿಗೆ ಬೆರೆಯುವ ಮನಸ್ಸಿನವರು. ಅಲ್ಲದೇ ನೇರ ಸಂಪರ್ಕಕ್ಕೆ ಸುಲಭವಾಗಿ ಸಿಗುತ್ತಾರೆ. ಜನ ಸಾಮಾನ್ಯರೊಂದಿಗೆ ಬೆರೆಯುವ ನಾಯಕರಾದ ಅಪ್ಪು ಪಟ್ಟಣಶೆಟ್ಟಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕೆಂದು ಅಭಿಮಾನಿಯ ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನು ಪಪ್ಪು ಎಸ್.ಎಸ್.ಎಲ್.ಸಿವರೆಗೆ ಓದಿದ್ದು, ಸದ್ಯ ಪೇಂಟಿಂಗ್ ಕೆಲಸ ಮಾಡುತ್ತಾರೆ. ನಮ್ಮ ಮೆಚ್ಚಿನ ಹೀರೋಗಾಗಿ ಸುಮಾರು 3000 ರೂಪಾಯಿ ಖರ್ಚು ಮಾಡಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆಂದು ಹೇಳಿದ್ದಾರೆ.


Leave a Reply