ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವು ಅದು ದೇವರು ಮಾಡಿದ ಬಹಳ ದೊಡ್ಡ ತಪ್ಪು. ಅವರ ಅಗಲಿಕೆಯನ್ನು ಒಪ್ಪುವ ಮನಸ್ಸು ಯಾರಿಗೂ ಇಲ್ಲ. ಅಪ್ಪು ನಮ್ಮ ಜೊತೆ ಹೇಗೆ ಜೀವಂತವಾಗಿ ಇರುತ್ತಾರೆ ಅನ್ನೋದಕ್ಕೆ ಈ ಪುಟಾಣಿ ಬಾಲಕಿಯೇ ಸಾಕ್ಷಿ. ಪುಟಾಣಿ ಬಾಲಕಿಯ ಬಾಯಲ್ಲಿ ಅಪ್ಪು ಸಾಂಗ್ ಹಾಡಿಸಿ ಅಪ್ಪುವನ್ನ ನಿತ್ಯ ನೆನೆಯುತ್ತಿರೋ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿದ್ದಾರೆ.

ಅಪ್ಪು ಅಂದರೇ ಎಲ್ಲರಿಗೂ ಪ್ರೀತಿ, ಅವರನ್ನು ಬೆಳ್ಳಿ ಪರದೆಯಲ್ಲಿ ಮಾತ್ರವಲ್ಲ ಟಿವಿಯಲ್ಲೂ ನೋಡೋದೆ ಸಂತೋಷ, ಸಂಭ್ರಮ. ಅವರ ಅಗಲಿಕೆಯಿಂದ ನೊಂದ ಅಭಿಮಾನಿ ಕುಟುಂಬ, ಅಪ್ಪು ನಟಿಸಿರೋ ಚಿತ್ರಗಳ ಹೆಸರಿನಲ್ಲೇ ಒಂದು ಹಾಡು ಮಾಡಿದ್ದಾರೆ. ಅಪ್ಪು ನಟನೆಯ ಚಿತ್ರಗಳ ಹೆಸರನ್ನೇ ಬಳಸಿಕೊಂಡು ವೈದ್ಯ ಡಾ.ವೆಂಕಟೇಶ್ ಸಾಲುಗಳನ್ನ ಬರೆದಿದ್ದಾರೆ. ಅದಕ್ಕೆ ಅವರ ಮಗಳು ಆರಾಧನಾ ಜೀವ ತುಂಬಿ ಹಾಡಿದ್ದಾಳೆ. ಅಪ್ಪು ಅಂದ್ರೇ ಇಡೀ ಮನೆಯರಿಗೆಲ್ಲ ಇಷ್ಟ. ಅದರಲ್ಲಿಯೂ ವೆಂಕಟೇಶ್ ಮತ್ತು ಅನುಪಮಾ ದಂಪತಿ ತಮ್ಮ ಮಗನಿಗೆ ಅಪ್ಪು ಅಂತಾನೇ ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ವೀರವನಿತೆ ಓಬವ್ವನನ್ನು ನೆನೆದ ಮೋದಿ – ಕನ್ನಡದಲ್ಲಿ ಟ್ವೀಟ್

8 ವರ್ಷದ ಆರಾಧನಾಗೂ ಕೂಡ ಅಪ್ಪು ಅಂದ್ರೆ ಇಷ್ಟ. ಅದಕ್ಕೆ ಆಕೆಯ ಮಾತುಗಳೇ ಸಾಕ್ಷಿ. ಅಪ್ಪು ಡ್ಯಾನ್ಸ್, ಫೈಟು, ಸಾಂಗ್ ಅಂದ್ರೆ ಮೀಸ್ ಮಾಡದೇ ನೋಡೋ ಆರಾಧನಾ ಅಪ್ಪು ಅವರನ್ನು ತಮ್ಮಲ್ಲಿ ಜೀವಂತವಾಗಿ ನೋಡ್ತಿದ್ದಾರೆ. ಅಪ್ಪು ಯಾಕೆ ಜೀವಾಂತವಾಗಿಯೇ ಇರುತ್ತಾರೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಅಪ್ಪು ಪ್ರತಿಯೊಬ್ಬ ಅಭಿಮಾನಿ ಹೃದಯದಲ್ಲೂ ನಿತ್ಯ ಬದುಕುತ್ತಾರೆ.

Comments

Leave a Reply

Your email address will not be published. Required fields are marked *