ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಹಾಲು, ತುಪ್ಪ ಕಾರ್ಯ – ಲೀಲಮ್ಮ ಕುಟುಂಬದ ಆಪ್ತರು ಮಾತ್ರ ಭಾಗಿ

ಬೆಂಗಳೂರು: ಕನ್ನಡ ಚಿತ್ರರಂಗದ ಕಲಾಸರಸ್ವತಿ ಲೀಲಮ್ಮ ಇನ್ನು ನೆನಪಷ್ಟೇ ಅಮ್ಮನ ಕಳೆದುಕೊಂಡ ಆಘಾತದಿಂದ ಪುತ್ರ ವಿನೋದ್ ರಾಜ್ ಇನ್ನೂ ಹೊರಬಂದಿಲ್ಲಇವತ್ತು ಲೀಲಾವತಿ (Leelavathi) ಅವರ ಹಾಲು ತುಪ್ಪದ (Haalu-Tuppa) ಕಾರ್ಯ ನೆರವೇರಿಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಹಾಲುತುಪ್ಪದ ಕಾರ್ಯ ನಡೆಯಲಿದೆ. ಬಳಿಕ 11 ದಿನದ ಕಾರ್ಯ ಮಾಡಲು ನಿರ್ಧಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರಷ್ಟೇ ಭಾಗಿಯಾಗುತ್ತಾರೆ. ಮಧ್ಯಾಹ್ನ 12 ಗಂಟೆಯ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.  ಇದನ್ನೂ ಓದಿ: ರಜನಿಕಾಂತ್‌ಗೆ 10 ಎಕರೆ ಜಾಗ ತೆಗೆದುಕೊಟ್ಟಿದ್ದರು ಲೀಲಾವತಿ: ಬ್ರಹ್ಮಾಂಡ ಗುರೂಜಿ

 

ಶನಿವಾರ ಸಂಜೆ ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಬಳಿ ಲೀಲಾವತಿ ಅವರ ಫಾರ್ಮ್ ಹೌಸ್‌ನಲ್ಲಿರುವ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಅಂತಿಮ ವಿಧಿ ವಿಧಾನ ಕಾರ್ಯವನ್ನು ಪುತ್ರ ವಿನೋದ್ ರಾಜ್ (Vinod Raj) ಹಾಗೂ ಮೊಮ್ಮಗ ಯುವರಾಜ್ ನೆರವೇರಿಸಿದರು.

 

ಮಗನ ಬಗ್ಗೆ ಮೊದಲ ಬಾರಿಗೆ ವಿನೋದ್ ರಾಜ್ ಮನದಾಳ ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಮಗನ ವಿದ್ಯಾಭ್ಯಾಸಕ್ಕಾಗಿಯೇ ಅವನನ್ನು ನಮ್ಮಿಂದ ದೂರ ಇಟ್ಟಿದ್ದೆವು. ಆದರೆ ತಾಯಿ ಅವನಿಗೆ ಕನ್ನಡವನ್ನು ಚೆನ್ನಾಗಿ ಕಲಿಸಿಕೊಟ್ಟಿದ್ದಾರೆ. ನನ್ನನ್ನ ನನ್ನ ತಾಯಿ ಬೆಳೆಸಿದ ಹಾಗೆ ಅವನನ್ನು ಅವಳ ತಾಯಿ ಬೆಳೆಸಿದ್ದಾರೆ. ಆದರೆ ಹೆಚ್ಚು ಅಜ್ಜಿ ಜೊತೆ ಒಡನಾಟಕ್ಕೆ ಅವಕಾಶ ಸಿಗಲಿಲ್ಲ. ಸದ್ಯ ಒಳ್ಳೆ ವಿದ್ಯಾಭ್ಯಾಸ ಪಡೆದು 50 ಸಾವಿರ ರೂ. ಸಂಬಳ ಪಡೆಯುತ್ತಿದ್ದಾನೆ ಎಂದು ಹೇಳಿದರು.

ನಮ್ಮ ತಾಯಿ ಸ್ಮಾರಕ ಮಾಡಲು ತಯಾರಿ ಆರಂಭಿಸಲಿದ್ದೇನೆ. ಮ್ಯೂಸಿಯಂ ಮಾದರಿಯಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.