ಚಿಕನ್, ಮಟನ್, ಮೊಟ್ಟೆ, ಕಿಕ್ ಕೊಡೋ ಎಣ್ಣೆಯೇ ಪಾರ್ವತಿ ಸುತನಿಗೆ ನೈವೇದ್ಯ!

ಕೊಪ್ಪಳ: ಹಬ್ಬದಂದು ಗಣಪನಿಗೆ ಎಲ್ಲೆಡೆ ಕರಿಗಡಬು, ಉಂಡಿ, ಚಕ್ಕುಲಿ ಮಾತ್ರವಲ್ಲದೇ ತರತರದ ಹಣ್ಣು-ಹಂಪಲು ನೈವೇದ್ಯ ಇಡುವುದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಕುಟುಂಬ ಚಿಕನ್, ಮಟನ್, ಮೊಟ್ಟೆ ಜೊತೆಗೆ ಕಿಕ್ ಕೊಡೋ ಎಣ್ಣೆಯನ್ನು ಪಾರ್ವತಿ ಸುತನಿಗೆ ನೈವೇದ್ಯ ಆಗಿ ಇಟ್ಟಿದೆ.

ಎಲ್ಲಡೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳದ ಭಾಗ್ಯನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯದ ಕುಟುಂಬಗಳು ಗಣೇಶ ಚತುರ್ಥಿಯನ್ನು ವಿಶಿಷ್ಠವಾಗಿ ಆಚರಿಸಿ ಸುದ್ದಿಯಾಗಿದೆ.

ಕುಟುಂಬದವರು ಕಡ್ಡಾಯವಾಗಿ ಕೆಂಪು ಬಣ್ಣದ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮೊದಲ ಎರಡು ದಿನ ಎಲ್ಲರಂತೆ ಸಿಹಿ ತಿಂಡಿ-ತಿನಿಸು ನೈವೇದ್ಯ ಸಲ್ಲಿಸುತ್ತಾರೆ. ಮೂರನೇ ದಿನವಾದ ಇಂದು ಮಾತ್ರ ಗಣಪನಿಗೆ ನಾನ್ ವೆಜ್ ಅಡುಗೆಯೇ ನೈವೇದ್ಯ. ಚಿಕನ್ ಮಟನ್, ಮೊಟ್ಟೆ ಜೊತೆಗೆ ಮದ್ಯವನ್ನೂ ಇಟ್ಟು ನೈವೇದ್ಯ ಮಾಡಿ ಭಕ್ತಿ ಭಾವದಿಂದ ಪೂಜಿಸಿದ್ದಾರೆ.

ನಾನ್ ವೇಜ್ ಯಾಕೆ ಇಡುತ್ತಾರೆ?
ಈ ಕುಟುಂಬ ಮೂಲತಃ ಮಹಾರಾಷ್ಟ್ರದವರಾಗಿದ್ದು ಮಾಂಸಾಹಾರಿ ಹೋಟೆಲ್ ನಡೆಸಿಕೊಂಡು ಬಂದಿದೆ. ಈ ಭಾಗದಲ್ಲಿ ಸಾವಜಿ ಖಾನಾವಳಿ ಎಂದೇ ಪ್ರಸಿದ್ಧಿ. ಸಾವಜಿ ಖಾನಾವಳಿ ಅಂದರೆ ನಾನ್ ವೆಜ್‍ಗೆ ಫೇಮಸ್ ಕೂಡ ಆಗಿದೆ. ಹೀಗಾಗಿ ತಮ್ಮ ಉದ್ಯೋಗದಲ್ಲಿ ಇನ್ನಷ್ಟು ಶ್ರೇಯಸ್ಸು ಸಿಗಲಿ ಅಂತ ಗಣೇಶ ಚತುರ್ಥಿಯ ಮೂರನೇ ದಿನದಂದು ನಾನ್ ವೆಜ್ ನೈವೇದ್ಯವನ್ನು ಗಣೇಶನಿಗೆ ಇಡುತ್ತಾರೆ. ಈ ಪದ್ಧತಿ ಇಂದು ನಿನ್ನೆಯದಲ್ಲ ಹಿರಿಯರ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *