ಮಡಿಕೇರಿ: ಜಲಪ್ರಳಯಕ್ಕೆ ಕೊಡಗು ತತ್ತರಿಸಿಹೋಗಿದ್ದು, ಇದೀಗ ಅಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಹೀಗಾಗಿ ಸದ್ಯ ಕೊಡಗಿನಲ್ಲಿ ನಡೆದ ಒಂದೊಂದು ಕರುಣಾಜನಕದ ಕಥೆ ಹೊರಗೆ ಬರುತ್ತಿದೆ. ಕೆಲವೊಂದು ದಾರುಣ ಘಟನೆಗಳು ಮನಕಲಕುವಂತಿದೆ.
ಕೊಡಗು ಜಿಲ್ಲೆಯ ಪ್ರವಾಹ ಪೀಡತ ಪ್ರದೇಶವಾದ ಹಟ್ಟಿಹೊಳೆಯಲ್ಲಿ ಇದೇ ಆಗಸ್ಟ್ 30ರಂದು ಮದುವೆ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೀಗಾಗಿ ಮಗಳ ಮದುವೆಗೆಂದು ಚಿನ್ನ ಹಾಗೂ ಹಣವನ್ನು ತಂದೆ ಬೀರಿನಲ್ಲಿಟ್ಟಿದ್ದರು. ಈ ಬೀರು ಇದೀಗ ನೆಲಸಮವಾಗಿದ್ದು, ಇದನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

ಹೌದು. ಹಟ್ಟಿಹೊಳೆ ನಿವಾಸಿ ಉಮೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇದರಲ್ಲಿ ಹಿರಿಯ ಮಗಳಿಗೆ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ಆಕೆಯ ಮದುವೆಗೆಂದು ಉಮೇಶ್ ಅವರು ಚಿನ್ನ ಹಾಗೂ ಹಣವನ್ನು ಬೀರಿನಲ್ಲಿಟ್ಟಿದ್ದರು. ಈ ಬೀರು ಇದೀಗ ನೆಲಕಚ್ಚಿದೆ. ಸದ್ಯ ರಕ್ಷಣಾ ಸಿಬ್ಬಂದಿಯ ಸಹಾಯ ಪಡೆದು ಮನೆಯ ಅವಶೇಷದಡಿ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್, ಮಡಿಕೇರಿಯ ಕೊಡವ ಸಮಾಜದಲ್ಲಿ ಮಗಳ ಮದುವೆ ನಿಗದಿಯಾಗಿತ್ತು. ಆದ್ರೆ ಇದೀಗ ಅಲ್ಲಿ ಮದುವೆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಹೀಗಾಗಿ ಮಡಿಕೇರಿ ಓಂಕಾರೇಶ್ವರ ದೇವಸ್ಥಾನದಲ್ಲಿ ಮದುವೆ ಮುಹೂರ್ತವಿಟ್ಟು ಹೋಟೆಲಿನಲ್ಲಿ ಮುಂದಿನ ಕಾರ್ಯಕ್ರಮ ಮಾಡುವುದೆಂದು ನಿರ್ಧರಿಸಿದ್ದೇವೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನ ಸಂತ್ರಸ್ತರೇ, ಪರಿಹಾರ ವೆಬ್‍ಸೈಟಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ!

ಗುರುವಾರ ಬೆಳಗ್ಗೆ ಇಲ್ಲಿಂದ ಹೊರಟೋಗಿದ್ದೇವೆ. ಮನೆಯಲ್ಲಿ ಒಡವೆ, ಹಣ ಹಾಗೂ ಬಟ್ಟೆಗಳಿವೆ. ಒಟ್ಟಿನಲ್ಲಿ 30ರಂದು ಕಷ್ಟಪಟ್ಟಾದ್ರೂ ಮಗಳ ಮದುವೆ ಮಾಡಿಸಿಯೇ ಬಿಡುವುದು ಅಂತ ಉಮೇಶ್ ಹೇಳಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply