ಮಂಡ್ಯ: ಪ್ಲಾಸ್ಟಿಕ್ ಅಕ್ಕಿ ತಿಂದು ಕುಟುಂಬ ಆಸ್ಪತ್ರೆ ಪಾಲು – ಪ್ಲಾಸ್ಟಿಕ್ ಅಕ್ಕಿ ಎಂದು ಗೊತ್ತಾಗಿದ್ದು ಹೇಗೆ?

ಮಂಡ್ಯ: ನಿನ್ನೆಯಷ್ಟೇ ಬೆಂಗ್ಳೂರಲ್ಲಿ ಪ್ಲಾಸ್ಟಿಕ್ ಮೊಟ್ಟೆ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದರ ಬೆನ್ನಲ್ಲೇ ಇಂದು ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗುತ್ತಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಹೌದು. ಸಕ್ಕರೆ ನಾಡು ಮಂಡ್ಯದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಸಾಕ್ಷಿನೂ ಸಿಕ್ಕಿದೆ. ಮದ್ದೂರು ಪಟ್ಟಣದ ನಿವಾಸಿ ಕೃಷ್ಣ ಎಂಬವರು ತಮ್ಮ ಮನೆಯ ಸಮೀಪವಿದ್ದ ದಿನಸಿ ಅಂಗಡಿಯಿಂದ 25 ಕೆಜಿಯ ಅಕ್ಕಿ ಮೂಟೆ ತಂದಿದ್ರು. ಅದರಲ್ಲಿ ಅನ್ನಮಾಡಿ ಸುಮಾರು 20 ಕೆಜಿಯಷ್ಟು ಅಕ್ಕಿಯನ್ನೂ ಖಾಲಿ ಮಾಡಿದ್ರು. ಆದ್ರೆ ಅಕ್ಕಿಯನ್ನು ಬೇಯಿಸಿ ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಮಾಮೂಲಾಯ್ತು.

ಇದನ್ನೂ ಓದಿ: ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

ಕೃಷ್ಣ ಅವರ ಮನೆಯಲ್ಲಿ ಗಂಡ, ಹೆಂಡತಿ ಇಬ್ಬರು ಮಕ್ಕಳಿದ್ದು, ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಪಡೆದ್ರು. ಕೊನೆಗೆ ಅನುಮಾನಗೊಂಡ ಕೃಷ್ಣ ಅಕ್ಕಿಯನ್ನು ಬೇಯಿಸಿ ಉಂಡೆ ಕಟ್ಟಿ ನೆಲಕ್ಕೆ ಹಾಕಿದಾಗ ಬಾಲ್‍ನಂತೆ ಎಗರಿತು. ಅನ್ನದ ಉಂಡೆ ಬಿರುಕು ಬಿಡದೇ, ಒಡೆದು ಹೋಗದೇ ರಬ್ಬರ್ ಬಾಲಿನಂತೆ ಬೌನ್ಸ್ ಆಯ್ತು. ಈ ವೇಳೆ ಅದು ಪ್ಲಾಸ್ಟಿಕ್ ಅಕ್ಕಿ ಎಂಬುವುದು ಬಯಲಾಯ್ತು.

ಈ ಕುರಿತು ಪ್ರಭಟನೆ ನಡೆಸಿ ಮದ್ದೂರು ತಹಶೀಲ್ದಾರ್ ಅವರಿಗೆ ಅಕ್ಕಿಯ ಒಂದಷ್ಟು ಸ್ಯಾಂಪಲ್ ನೀಡಿದ್ದು, ಪ್ರಯೋಗಾಲಯಕ್ಕೂ ಕಳಿಸಲಾಗಿದೆ.

https://www.youtube.com/watch?v=OcNJ_ZrwYJM

Comments

Leave a Reply

Your email address will not be published. Required fields are marked *