ಯಶವಂತಪುರದಲ್ಲಿ ನಕಲಿ ಮತದಾನದ ಹಾವಳಿ

ಬೆಂಗಳೂರು: ಮತದಾನ ಆರಂಭವಾದ ಕೆಲವೇ ಕ್ಷಣಗಳಲ್ಲಿ ನಕಲಿ ಮತದಾನದ ಹಾವಳಿ ಶುರುವಾಗಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಳ್ಳಂಬೆಳಗ್ಗೆಯೇ ಫ್ರಾಕ್ಸಿ ವೋಟ್ ಹಾವಳಿ ಶುರುವಾಗಿದೆ. ನಾಗದೇವನಹಳ್ಳಿ ರೋಟರಿ ವಿದ್ಯಾಲಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿ ಮತದಾರ ಚಾಲೆಂಜ್ ವೋಟ್ (ಚಹರೆ ಮತ್ತು ಗುರುತು ಹೋಲಿಕೆ ಆಗದಿದ್ದಲ್ಲಿ) ಮಾಡಲು ಮುಂದಾಗಿದ್ದಾರೆ.

ಮನ್ಸೂಖ್ ಪಟೇಲ್ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ನಕಲಿ ಮತದಾನ ಮಾಡಿರುವ ಸಂಶಯ ವ್ಯಕ್ತವಾಗುತ್ತಿದ್ದು, ಚುನಾವಣಾ ಅಧಿಕಾರಿಗಳು ಈ ತಪ್ಪಿಗೆ ಸೂಕ್ತ ಉತ್ತರ ಕೊಡುತ್ತಿಲ್ಲ.

ಕ್ರಮ ಸಂಖ್ಯೆ 1034 ವೋಟರ್ ಐಡಿಗೆ ನಕಲಿ ಮತದಾನ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಮನ್ಸೂಖ್ ಪಟೇಲ್ ಟೆಂಡರ್ ವೋಟಿಂಗ್‍ (ಮತಪತ್ರದ ಮೂಲಕ ಮತದಾನ ಮಾಡೋದು. ಈ ಪತ್ರವನ್ನು ಚುನಾವಣಾ ಆಯೋಗ ಸೀಲ್ ಮಾಡಿ ತನ್ನ ಬಳಿ ಇಟ್ಟುಕೊಳ್ಳುತ್ತದೆ. ನ್ಯಾಯಾಲಯದ ಸೂಚನೆ ಮೇರೆಗೆ ಈ ಪತ್ರವನ್ನು ತೆರೆಯಲಾಗುತ್ತದೆ)ಗೆ ಪಟ್ಡು ಹಿಡಿದಿದ್ದಾರೆ. ಟೆಂಡರ್ ವೋಟ್ ಮಾಡಲೇ ಬೇಕು ಎಂದು ಮನ್ಸೂಖ್ ಹಠ ಮಾಡುತ್ತಿದ್ದಾರೆ.

ಇದೇ ವೇಳೆ ಭಾನು ವಿದ್ಯಕೇಂದ್ರದಲ್ಲಿ ಲೈಟ್ ಸರಿ ಆಗಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟಿಂಗ್ ಮಿಷನ್ ಸರಿಯಾಗಿ ಕಾಣುತ್ತಿಲ್ಲ. ಯಾರಿಗೋ ಹಾಕೋ ಮತ ಯಾರಿಗೋ ಹಾಕುವಂತೆ ಆಗುತ್ತಿದೆ ಎಂದು ಮತದಾರರು ಆಕ್ರೋಶಗೊಂಡಿದ್ದಾರೆ. ಅದಷ್ಟು ಬೇಗ ಲೈಟಿಂಗ್ ವ್ಯವಸ್ಥೆ ಮಾಡಿ ಮತದಾರರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *