ಅಧಿಕಾರಿಗಳು ಅಡ್ಡದಾರಿ – ಸತ್ತವರ ಹೆಸರಿನಲ್ಲಿ ವ್ಯಾಕ್ಸಿನೇಷನ್, ಕೋವಿಡ್ ಟೆಸ್ಟ್ ರಿಪೋರ್ಟ್!

ಬೆಂಗಳೂರು/ಯಾದಗಿರಿ: ವ್ಯಾಕ್ಸಿನೇಶನ್, ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳು ಅಡ್ಡದಾರಿ ಹಿಡಿದಂತೆ ಕಾಣುತ್ತಿದೆ. ಸತ್ತವರ ಹೆಸರಿನಲ್ಲಿ ವ್ಯಾಕ್ಸಿನೇಷನ್, ಕೋವಿಡ್-19 ಟೆಸ್ಟ್ ರಿಪೋರ್ಟ್ ನೀಡಿರೋದು ಬೆಳಕಿಗೆ ಬಂದಿದೆ.

ಯಾದಗಿರಿ ಜಿಲ್ಲೆಯ ದೋರನಹಳ್ಳಿ ನಿವಾಸಿ ಮುರಾರಿ ರಾವ್ ಶಿಂಧೆ ಎಂಬುವರು ಮೃತಪಟ್ಟ 3 ತಿಂಗಳಿಗೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಬಂದಿದೆ. ಕಳೆದ ವರ್ಷದ ಮೇ 21ರಂದು ಮುರಾರಿ ರಾವ್ ಮೃತಪಟ್ಟಿದ್ದರು. ಆಗಸ್ಟ್ ತಿಂಗಳಲ್ಲಿ ಇವರು ಎರಡನೇ ಡೋಸ್ ಪಡೆದಂತೆ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ರಿಲೀಸ್ ಆಗಿದೆ.ಇದಲ್ಲದೆ 4 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ನೆಗೆಟಿವ್ ರಿಪೋರ್ಟ್ ನೀಡಲಾಗಿದೆ. ಜೂನ್ 12 ರಂದು ಯಾದಗಿರಿಯ ಯಮನಪ್ಪ ಮೃತಪಟ್ಟಿದ್ದರು. ಆದರೆ ಆರೋಗ್ಯ ಇಲಾಖೆ ನವೆಂಬರ್‌ನಲ್ಲಿ ಅವರಿಗೆ ನೆಗೆಟಿವ್ ರಿಪೋರ್ಟ್ ನೀಡಿದೆ. ಯಾಕೆ ಹೀಗೆ ಎಂದು ಕೇಳಿದ್ರೆ, ಇದು ಹೊಸ ಸಿಬ್ಬಂದಿ ಯಡವಟ್ಟು ಎಂದು ಯಾದಗಿರಿ ಡಿಹೆಚ್‍ಓ ಜಾರಿಕೊಳ್ತಾರೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

ಇನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅರಿಗಾ ಲ್ಯಾನ್ ನಡೆಸ್ತಿರುವ ಟೆಸ್ಟಿಂಗ್‍ನಲ್ಲೂ ಗೋಲ್ಮಾಲ್ ಆರೋಪ ಕೇಳಿಬಂದಿದೆ. ಇಂದು ದುಬೈಗೆ ತೆರಳಬೇಕಿದ್ದ ಯುವತಿಯೊಬ್ರು ಖಾಸಗಿ ಲ್ಯಾಬ್‍ನಿಂದ ನೆಗೆಟಿವ್ ರಿಪೋರ್ಟ್ ತಂದಿದ್ರು. ಆದ್ರೆ ಏರ್‌ಪೋರ್ಟ್‌ನಲ್ಲಿ ನಡೆಸಿದ ಟೆಸ್ಟ್‌ನಲ್ಲಿ ಪಾಸಿಟಿವ್ ಎಂದು ತೋರಿಸಲಾಗಿದೆ. ಹೀಗಾಗಿ ಆಕೆಗೆ ವಿಮಾನ ಹತ್ತಲು ಏರ್‌ಪೋರ್ಟ್‌ ಸಿಬ್ಬಂದಿ ಬಿಟ್ಟಿರಲಿಲ್ಲ. ಇದರಿಂದ ಅನುಮಾನಗೊಂಡ ಯುವತಿ ಬಿಬಿಎಂಪಿಯಲ್ಲಿ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಎಂದೇ ಬಂದಿದೆ. ಅರಿಗಾ ಲ್ಯಾಬ್ ವಿರುದ್ಧ ಯುವತಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

Comments

Leave a Reply

Your email address will not be published. Required fields are marked *