ಬೆಂಗಳೂರು: ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ನಾಯಕರುಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಈ ಎಲ್ಲದರ ನಡುವೆ ಕಳೆದ ಎರಡ್ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೇಕ್ ನ್ಯೂಸ್ ಗಳು ಹರಿದಾಡುತ್ತಿವೆ.
ಇತ್ತೀಚೆಗೆ ಏಪ್ರಿಲ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಪಾಕಿಸ್ತಾನಕ್ಕೆ ಸೈಲೆಂಟಾಗಿ ಒನ್ ಡೇ ಟ್ರಿಪ್ ಹೋಗಿದ್ರಂತೆ. ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆಲ್ಲಲು ಐಎಸ್ಐ ನೆರವು ಕೂಡ ಕೋರಿದ್ರಂತೆ. ಇದಕ್ಕೆ ಪೂರಕವಾಗಿ ಮುಂಬೈನಿಂದ ಕರಾಚಿಗೆ ಹೋಗಿ ಬಂದ್ರಂತೆ. ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಎಸ್ಆರ್ ಏವಿಯೇಷನ್ನ ನಕಲಿ ಲೆಟರ್ ಕೂಡ ಹರಿಬಿಡಲಾಗಿದೆ. ಕೆಲವರು ಇದನ್ನು ನಿಜ ಅಂತಾ ತಿಳಿದು ವಾಟ್ಸಪ್, ಫೇಸ್ಬುಕ್ಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಕಿಡಿಕಾರಿದುಂಟು.
ನಕಲಿ ಲೆಟರ್ ಹರಿದಾಡುತ್ತಲೇ ವಿಎಸ್ಆರ್ ಏವಿಯೇಷನ್ ಕಂಪೆನಿ ಇದೆಲ್ಲಾ ಫೇಕ್ ಅಂತಾ ಸ್ಪಷ್ಟೀಕರಣ ನೀಡಿದೆ. ಸಿಎಂ ಕಚೇರಿ ಕೂಡ ಇದೆಲ್ಲಾ ಸುಳ್ಳು, ಬಿಜೆಪಿಯ ಅಪಪ್ರಚಾರ ಎಂದು ಕಾಂಗ್ರೆಸ್ ಆರೋಪಿಸಿದೆ.
https://twitter.com/brijeshkalappa/status/990876107653177345
ಆ ಫೇಕ್ ಲೆಟರ್ ನಲ್ಲಿ ಏನಿದೆ?
* ವಿಎಸ್ಆರ್ ಏವಿಯೇಷನ್ ಅಕಾಡೆಮಿಯ ನಕಲಿ ಲೆಟರ್ ಹೆಡ್ ಸೃಷ್ಟಿ
* ಏಪ್ರಿಲ್ 13ರಂದು ಸಂಜೆ 5ಕ್ಕೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಕರಾಚಿಗೆ ಸಿಎಂ ಮತ್ತು ಜಮೀರ್
* ಸಿಎಂ ಮತ್ತು ಜಮೀರ್ ಹೊತ್ತ ವಿಮಾನ ಕರೆಕ್ಟಾಗಿ 6.15ಕ್ಕೆ ಕರಾಚಿಯಲ್ಲಿ ಲ್ಯಾಂಡ್
* ಏಪ್ರಿಲ್ 13ರ ಸಂಜೆ 7ಕ್ಕೆ ಹೊರಟು ರಾತ್ರಿ 9.10ಕ್ಕೆ ದೆಹಲಿಗೆ ಸಿದ್ದರಾಮಯ್ಯ ಮತ್ತು ಜಮೀರ್ ವಾಪಸ್
* ದೆಹಲಿಯಿಂದ ರಾತ್ರಿ 11.45ಕ್ಕೆ ಹೊರಟು ಏ.14ರ ನಸುಕಿನಜಾವ 2 ಗಂಟೆಗೆ ಬೆಂಗಳೂರಿಗೆ ವಾಪಸ್
* ಮುಕ್ಕಾಲು ಗಂಟೆ ಅವಧಿಯಲ್ಲಿ ಐಎಸ್ಐ ನಾಯಕರ ಜೊತೆ ಸಿಎಂ ಮತ್ತು ಜಮೀರ್ ಸಭೆ
* ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ವಿನ್ ಮಾಡಿಸಿಕೊಡಿ ಅಂತಾ ಐಎಸ್ಐಗೆ ಮನವಿ
* ಕೋಟಿಗಟ್ಟಲೆ ದುಡ್ಡು ಕೊಟ್ಟು, ಎಲೆಕ್ಷನ್ನಲ್ಲಿ ಹರಿಸಲು ನಕಲಿ ನೋಟು ತರ್ತಾರಂತೆ ಸಿಎಂ
ಏಪ್ರಿಲ್ 13ರಂದು ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿದ್ರು. ಏಪ್ರಿಲ್ 14ರ ನಸುಕಿನ ಜಾವ 2 ಗಂಟೆಗೆ ಬೆಂಗಳೂರಿಗೆ ಹಿಂತಿರುಗಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.


Leave a Reply