ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

ಹಾಸನ: ಉಪ್ಪಿಗೆ ರೆಡ್ ಆಕ್ಸೈಡ್ ಬೆರೆಸಿ ಅದನ್ನೇ ಪೊಟ್ಯಾಷ್ ಗೊಬ್ಬರ ಎಂದು ಮಾರುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.

ಪೊಟ್ಯಾಷ್ ಗೊಬ್ಬರದ ಚೀಲವನ್ನು ಹೋಲುವ ಚೀಲಕ್ಕೆ ನಕಲಿ ಗೊಬ್ಬರ ತುಂಬಿ ಪೂರೈಕೆ ಮಾಡುತ್ತಿದ್ದ ಜಾಲ ಹಾಸನದಲ್ಲಿ ಸಿಕ್ಕಿಬಿದ್ದಿದೆ. ಹಾಸನದ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆ ಪಿಎಸ್‍ಐ ಅಜಯ್ ತಂಡ ಈ ಪ್ರಕರಣ ಬೇಧಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಒಡೆದು ಹೋದ 4 ಕೆರೆ ಕಟ್ಟೆಗಳು – ಆತಂಕದಲ್ಲಿ ಗ್ರಾಮಸ್ಥರು

ಆನಂದ್ ಮತ್ತು ಅವಿನಾಶ್ ಬಂಧಿತ ಆರೋಪಿಗಳು. ಮೈಸೂರಿನ ಜಿಲ್ಲೆಯ ಶೆಡ್ ಒಂದರಲ್ಲಿ ತಯಾರಾಗುವ ನಕಲಿ ಗೊಬ್ಬರವನ್ನು ಆರೋಪಿಗಳಾದ ಅವಿನಾಶ್, ಆನಂದ್ ಹಾಸನ ಜಿಲ್ಲೆಗೆ ಕಳ್ಳಸಾಗಾಣೆ ಮಾಡುತ್ತಿದ್ದರು. ಇದೇ ಟಾಟಾ ಎಸಿಯಲ್ಲಿ ನಕಲಿ ಗೊಬ್ಬರವನ್ನು ತುಂಬಿಕೊಂಡು ಸಾಲಿಗ್ರಾಮ ಕಡೆಯಿಂದ ಕೇರಳಾಪುರ ಮಾರ್ಗವಾಗಿ ಬರುವಾಗ, ಕೊಣನೂರು ಠಾಣೆ ಪಿಎಸ್‍ಐ ಅಜಯ್ ಕುಮಾರ್ ತಂಡ ಈ ನಕಲಿ ಗೊಬ್ಬರ ಸಾಗಿಸುತ್ತಿದ್ದವರನ್ನು ಗೂಡ್ಸ್ ವಾಹನ ಸಮೇತ ಬಂಧಿಸಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

ಈ ಟಾಟಾ ಗೂಡ್ಸ್ ವಾಹನದಿಂದ 50 ಕೆಜಿ ತೂಕದ ಒಟ್ಟು 56 ನಕಲಿ ಗೊಬ್ಬರ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ. ನಕಲಿ ಗೊಬ್ಬರದ ಬಗ್ಗೆ ಎಚ್ಚರದಿಂದ ಇರುವಂತೆ ರೈತರಿಗೆ ಹಾಸನ ಎಸ್‍ಪಿ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *