ಪಬ್ಲಿಕ್ ಟಿವಿಯಲ್ಲಿ ಜಾಹೀರಾತು ಪ್ರಸಾರ ಮಾಡ್ತೀನಿ ಅಂತಾ ಹಣ ಪೀಕುತ್ತಿದ್ದವ ಅರೆಸ್ಟ್

ಮೈಸೂರು: ಪಬ್ಲಿಕ್ ಟಿವಿ ನಕಲಿ ಗುರುತಿನ ಚೀಟಿ ಇಟ್ಟಿಕೊಂಡು ಜನರಲ್ಲಿ ಹಣ ಪಡೆಯುತ್ತಿದ್ದಾತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿ ಸಿಕ್ಕ ಅಡ್ರೆಸ್ ಪ್ರೂಫ್‍ನಲ್ಲಿ ಬೆಂಗಳೂರಿನ ಚೋಳರಪಾಳ್ಯದ ಲೇಪಾಕ್ಷಿ ಸಂಜಯ್ ಅಂತಾ ಹೆಸರಿದೆ.

ಪಬ್ಲಿಕ್ ಟಿವಿಯಲ್ಲಿ ಜಾಹೀರಾತು ಪ್ರಸಾರ ಮಾಡುತ್ತೇನೆ ಹಾಗೂ ನಿಮ್ಮ ಪರವಾಗಿ ಸುದ್ದಿ ಮಾಡುತ್ತೇನೆ ಎಂದು ಹಣ ವಸೂಲಿ ಮಾಡುತ್ತಿದ್ದ. ಇಂದು ಸಹ ನಂಜನಗೂಡು ಉಪಚುನಾವಣೆ ಮತ ಎಣಿಕೆ ವೇಳೆ ಪಬ್ಲಿಕ್‍ಟಿವಿ ವರದಿಗಾರನೆಂದು ಹೇಳಿಕೊಂಡು ಓಡಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಸದ್ಯ ಈ ವಂಚಕನನ್ನು ನಂಜನಗೂಡು ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ರೀತಿ ನಿಮ್ಮ ಬಳಿ ಯಾರಾದ್ರೂ ಪಬ್ಲಿಕ್ ಟಿವಿ ಹೆಸರನ್ನು ಹೇಳಿಕೊಂಡು ಹಣ ವಸೂಲಿಗೆ ಬಂದರೆ ಪಬ್ಲಿಕ್ ಟಿವಿ ಬೆಂಗಳೂರು ಕಚೇರಿಗೆ ಮಾಹಿತಿ ನೀಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ.

Comments

Leave a Reply

Your email address will not be published. Required fields are marked *