ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

ಹೈದರಾಬಾದ್: ನನ್ನ ಹೆತ್ತವರೇ ನನ್ನ ಸಹೋದರನನ್ನು ಕೊಂದಿದ್ದಾರೆ ಎಂದು ಸುಳ್ಳು ದೂರನ್ನು ನೀಡಿರುವ ವ್ಯಕ್ತಿ ತಾನೇ ಜೈಲು ಪಾಲಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಆರೋಪಿಯನ್ನು ಬಂಜಾರಾ ಹಿಲ್ಸ್‌ನ ನಂದಿನಗರ ನಿವಾಸಿ ಬಾನೋತ್ ಲಾಲು ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಲಾಲು ಪೋಷಕರ ವಿರುದ್ಧ ಮಾಡಿರುವ ದೂರು ಸುಳ್ಳು ಎಂದು ಗೊತ್ತಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಲಾಲು ಡಿಸೆಂಬರ್ 17 ರಂದು ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾನೆ. ಆಗ ತನ್ನ ಸಹೋದರನನ್ನು ಹೆತ್ತವರು ಕೊಂದಿದ್ದಾರೆ ಎಂದು ಹೇಳಿ ಪೋಷಕರ ವಿರುದ್ಧ ಆರೋಪ ಮಾಡಿದ್ದಾನೆ. ಮಾಹಿತಿ ಪಡೆದಿರುವ ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದಾರೆ. ಯಾವುದೇ ಕೊಲೆ ನಡೆದಿಲ್ಲ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆದರೆ ಲಾಲು ಯಾಕೆ ಇಂಥಹ ಆರೋಪನ್ನು ಮಾಡಿದ್ದಾನೆ ಎಂದು ವಿಚಾರಿಸಿದಾಗ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?

POLICE JEEP

ಲಾಲು ಸಹೋದರ ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದನು. ಆದರೆ ಲಾಲು ತಮಾಷೆ ಮತ್ತು ಪೊಲೀಸರು ಅಲರ್ಟ್ ಆಗಿದ್ದಾರ ಎಂದು ಪರೀಕ್ಷೆ ಮಾಡಲು ನಕಲಿ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ದೂರನ್ನು ಪರಿಶೀಲಿಸಿದೆ. ಪೊಲೀಸರನ್ನು ತಪ್ಪುದಾರಿಗೆಳೆಯುವ ಮತ್ತು ಗಾಬರಿಯನ್ನುಂಟುಮಾಡುವ ತಪ್ಪು ಮಾಹಿತಿ ನೀಡಿರುವ ಲಾಲುಗೆ ಮೂರು ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Comments

Leave a Reply

Your email address will not be published. Required fields are marked *